Numbers 9:7 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ನಾವು ಮನುಷ್ಯ ಶವವನ್ನು ಮುಟ್ಟಿದ್ದರಿಂದ ಅಶುದ್ಧರಾಗಿದ್ದೇವೆ. ಆದರೆ ನೇಮಕವಾದ ಕಾಲದಲ್ಲಿ ಯೆಹೋವನ ಪಸ್ಕಹಬ್ಬದ ಯಜ್ಞವನ್ನು ಇತರ ಇಸ್ರೇಲರೊಡನೆ ಅರ್ಪಿಸುವುದಕ್ಕೆ ಸಾಧ್ಯವಿಲ್ಲವೇ?” ಎಂದು ಕೇಳಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಈ ಜನರು ಮೋಶೆಗೆ “ಮನುಷ್ಯನ ಶವಸೋಂಕಿದರಿಂದ ನಾವು ಅಶುದ್ಧರಾದೆವು. ನಾವು ಉಳಿದ ಇಸ್ರಾಯೇಲರೊಡನೆ ನೇಮಕವಾದ ಕಾಲದಲ್ಲಿ ಯೆಹೋವನಿಗೆ ಯಜ್ಞವನ್ನು ಸಮರ್ಪಿಸುವುದಕ್ಕೆ ಅಪ್ಪಣೆಯಿಲ್ಲವೋ?” ಎಂದು ಕೇಳಿದರು.
Kannada BSI Bible 2016
ಆ ಮನುಷ್ಯರು ಅವನ ಸಂಗಡ ಮಾತನಾಡಿ--ನಾವು ಸತ್ತ ಮನುಷ್ಯನ ದೇಹವನ್ನು ಮುಟ್ಟಿದ್ದರಿಂದ ಅಶುದ್ಧರಾದೆವು; ಆದದರಿಂದ ನಾವು ಇಸ್ರಾಯೇಲ್‌ ಮಕ್ಕಳ ಮಧ್ಯದಲ್ಲಿ ಕರ್ತನ ಅರ್ಪಣೆ ಯನ್ನು ಅದರ ಸಮಯದಲ್ಲಿ ಅರ್ಪಿಸದ ಹಾಗೆ ನಮಗೆ ಯಾಕೆ ಅಡ್ಡಿಯಾಗಬೇಕು ಅಂದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಮನುಷ್ಯ ಶವ ಸೋಂಕಿದದರಿಂದ ನಾವು ಅಶುದ್ಧರಾದೆವು. ನಾವು ವಿುಕ್ಕ ಇಸ್ರಾಯೇಲ್ಯರೊಡನೆ ನೇಮಕವಾದ ಕಾಲದಲ್ಲಿ ಯೆಹೋವನಿಗೆ ಯಜ್ಞವನ್ನು ಸಮರ್ಪಿಸುವದಕ್ಕೆ ಅಪ್ಪಣೆಯಿಲ್ಲವೋ ಎಂದು ಕೇಳಲು ಮೋಶೆ ಅವರಿಗೆ -
Kannada Bible (KNCL) BSI 2016
“ನರಶವದ ಸೋಂಕಿನಿಂದ ನಾವು ಅಶುದ್ಧರಾದೆವು. ನಿಯಮಿತ ಕಾಲದಲ್ಲಿ ಮಿಕ್ಕ ಇಸ್ರಯೇಲರೊಡನೆ ಸರ್ವೇಶ್ವರನಿಗೆ ಬಲಿಯನ್ನು ಸಮರ್ಪಿಸಲು ನಮಗೆ ಅಪ್ಪಣೆಯಿಲ್ಲವೆ?” ಎಂದು ವಿಚಾರಿಸಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಮೋಶೆಯ ಸಂಗಡ ಮಾತನಾಡಿ, “ನಾವು ಮನುಷ್ಯನ ಶವದ ಸೋಂಕಿನಿಂದ ಅಶುದ್ಧರಾಗಿದ್ದೇವೆ. ಆದ್ದರಿಂದ ನಾವು ಇಸ್ರಾಯೇಲರೊಡನೆ ನೇಮಕವಾದ ಸಮಯದಲ್ಲಿ ಯೆಹೋವ ದೇವರಿಗೆ ಬಲಿಯನ್ನು ಅರ್ಪಿಸಲು ನಮಗೆ ಏಕೆ ಅಡ್ಡಿಯಾಗಬೇಕು,” ಎಂದರು.