Obadiah 1:14 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ದಾರಿಯ ಚೌಕದಲ್ಲಿ ನೀನು ನಿಂತುಕೊಂಡು ತಪ್ಪಿಸಿಕೊಂಡು ಹೋಗುವವರನ್ನು ಸಾಯಿಸಿದೆ. ನೀನು ಹಾಗೆ ಮಾಡಬಾರದಾಗಿತ್ತು. ತಪ್ಪಿಸಿಕೊಂಡು ಹೋದವರನ್ನು ನೀನು ಸೆರೆಹಿಡಿದೆ. ನೀನು ಹಾಗೆ ಮಾಡಬಾರದಾಗಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀನು ಮರಣದಿಂದ ಓಡಿಹೋಗುವವರನ್ನು ಹಿಡಿದು ಕೊಲ್ಲುವುದಕ್ಕೆ ಅವರ ಮಾರ್ಗಗಳಲ್ಲಿ ನಿಂತು ಅವರನ್ನು ಸಂಹರಿಸಿದೆ. ಆ ಇಕ್ಕಟ್ಟಿನ ವೇಳೆಯಲ್ಲಿ ಪ್ರಾಣ ಉಳಿಸಿಕೊಂಡವರನ್ನು ಹಿಡಿದು ಶತ್ರುಗಳಿಗೆ ಒಪ್ಪಿಸಿಕೊಟ್ಟೆ.
Kannada BSI Bible 2016
ಅವನಲ್ಲಿ ಓಡಿ ಹೋದವರನ್ನು ಕಡಿದುಬಿಡುವದಕ್ಕೆ ನೀನು ಕೂಡುವ ದಾರಿಯಲ್ಲಿ ನಿಲ್ಲಬಾರದಾಗಿತ್ತು; ಕಷ್ಟದ ದಿನದಲ್ಲಿ ಅವನಲ್ಲಿ ಉಳಿದುಕೊಂಡವರನ್ನು ಒಪ್ಪಿಸಬಾರದಾಗಿತ್ತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಓಡಿಹೋಗುವವರನ್ನು ಕೊಲ್ಲುವದಕ್ಕೆ ದಾರಿಗಳು ಕೂಡುವ ಸ್ಥಳದಲ್ಲಿ ನಿಲ್ಲಬಾರದಾಗಿತ್ತು; ಇಕ್ಕಟ್ಟಿನ ವೇಳೆಯಲ್ಲಿ ತಪ್ಪಿಸಿಕೊಂಡವರನ್ನು ಶತ್ರುವಿಗೆ ಒಪ್ಪಿಸಬಾರದಾಗಿತ್ತು.
Kannada Bible (KNCL) BSI 2016
ತಪ್ಪಿಸಿಕೊಂಡು ಓಡಿಹೋಗುತ್ತಿದ್ದ ಅವರನ್ನು ಕೊಲ್ಲುವುದಕ್ಕಾಗಿ ಕೂಡುದಾರಿಗಳಲ್ಲಿ ನಿಲ್ಲಬಾರದಿತ್ತು. ತುರ್ತುಪರಿಸ್ಥಿತಿಯಲ್ಲಿ ತಪ್ಪಿಸಿಕೊಂಡವರನ್ನು ಶತ್ರುವಿನ ಕೈಗೆ ಒಪ್ಪಿಸಬಾರದಿತ್ತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರಲ್ಲಿ ಓಡಿಹೋದವರನ್ನು ಕಡಿದುಬಿಡುವುದಕ್ಕೆ ನೀನು ಕೂಡುವ ದಾರಿಯಲ್ಲಿ ನಿಲ್ಲಬಾರದಾಗಿತ್ತು. ಕಷ್ಟದ ದಿವಸದಲ್ಲಿ ಅವರಲ್ಲಿ ಉಳಿದುಕೊಂಡವರನ್ನು ಹಿಡಿದುಕೊಡಬಾರದಾಗಿತ್ತು.