Obadiah 1:20 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಸೆರೆ ಒಯ್ಯಲ್ಪಟ್ಟ ಇಸ್ರೇಲರು ಚಾರೆಪ್ತದವರೆಗೆ ಕಾನಾನ್ ದೇಶವನ್ನು ವಶಪಡಿಸಿಕೊಳ್ಳುವರು. ಸೆಫಾರದಿನಲ್ಲಿ ಸೆರೆಯಾಗಿರುವ ಜೆರುಸಲೇಮಿನವರು ನೆಗೆವಿನ ಪಟ್ಟಣಗಳನ್ನು ವಶಪಡಿಸಿಕೊಳ್ಳುವರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಸೆರೆಹೋಗಿರುವ ಆ ದಂಡಿನ ಇಸ್ರಾಯೇಲರು ಕಾನಾನ್ಯರ ದೇಶವನ್ನು ಚಾರೆಪತಿನವರೆಗೆ ತಮ್ಮದಾಗಿ ಮಾಡಿಕೊಳ್ಳುವರು. ಸೆಫಾರ ದಿನದಲ್ಲಿ ಸೆರೆಯಾಗಿ ಹೋಗಿರುವ ಯೆರೂಸಲೇಮಿನವರು ದಕ್ಷಿಣ ಪ್ರಾಂತ್ಯದ ಪಟ್ಟಣಗಳನ್ನು ವಶಪಡಿಸಿಕೊಳ್ಳುವರು.
Kannada BSI Bible 2016
ಇದಲ್ಲದೆ ಚಾರೆಪತಿನ ವರೆಗೂ ಕಾನಾನ್ಯರಲ್ಲಿರುವ ಇಸ್ರಾಯೇಲನ ಮಕ್ಕಳ ಈ ಸೈನ್ಯದ ಸೆರೆಯವರು ಸೆಫರಾದಿನಲ್ಲಿರುವ ಯೆರೂ ಸಲೇಮಿನ ಸೆರೆಯವರು ದಕ್ಷಿಣದ ಪಟ್ಟಣಗಳನ್ನು ಸ್ವಾಧೀ ನಮಾಡಿಕೊಳ್ಳುವರು.ಇದಲ್ಲದೆ ಚೀಯೋನ್ ಪರ್ವತದಲ್ಲಿ ರಕ್ಷಕರು ಏಸಾವಿನ ಬೆಟ್ಟಕ್ಕೆ ನ್ಯಾಯ ತೀರಿಸುವದಕ್ಕೋಸ್ಕರ ಏಳುವರು; ಆಗ ರಾಜ್ಯವು ಕರ್ತನದಾಗಿರುವದು.
Kannada BSI JV (ಕನ್ನಡ ಸತ್ಯವೇದವು J.V. (BSI))
ಸೆರೆಹೋಗಿರುವ ಆ ದಂಡಿನ ಇಸ್ರಾಯೇಲ್ಯರು ಕಾನಾನ್ಯರ ದೇಶವನ್ನು ಚಾರೆಪತಿನವರೆಗೆ ತಮ್ಮದಾಗಿ ಮಾಡಿಕೊಳ್ಳುವರು; ಸೆಪಾರದಿನಲ್ಲಿ ಸೆರೆಯಾಗಿರುವ ಯೆರೂಸಲೇವಿುನವರು ದಕ್ಷಿಣಪ್ರಾಂತದ ಪಟ್ಟಣಗಳನ್ನು ವಶಪಡಿಸಿಕೊಳ್ಳುವರು.
Kannada Bible (KNCL) BSI 2016
ಸೆರೆಹೋಗಿರುವ ಇಸ್ರಯೇಲಿನ ಸೈನಿಕರು ಕಾನಾನ್ ನಾಡನ್ನು ಚಾರೆಪತಿನವರೆಗೆ ವಶಪಡಿಸಿಕೊಳ್ಳುವರು. ಸೆಪಾರದ ಎಂಬಲ್ಲಿ ಸೆರೆಯಾಗಿರುವ ಜೆರುಸಲೇಮಿನವರು ದಕ್ಷಿಣ ಪ್ರಾಂತ್ಯದ ಪಟ್ಟಣಗಳನ್ನು ವಶಪಡಿಸಿಕೊಳ್ಳುವರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಚಾರೆಪತಿನವರೆಗೂ ಇರುವ ಪ್ರದೇಶವನ್ನು ಕಾನಾನ್ಯರಲ್ಲಿರುವ ಇಸ್ರಾಯೇಲ್ ಸೆರೆವಾಸಿಗಳು ವಶಪಡಿಸಿಕೊಳ್ಳುವರು. ಸೆಫಾರದಿನಲ್ಲಿರುವ ಯೆರೂಸಲೇಮಿನ ಸೆರೆಯವರು ದಕ್ಷಿಣದ ಪಟ್ಟಣಗಳನ್ನು ಸ್ವಾಧೀನಮಾಡಿಕೊಳ್ಳುವರು.