Philippians 1:17 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಬೇರೆ ಕೆಲವರು ತಮ್ಮ ಸ್ವಾರ್ಥದ ದೆಸೆಯಿಂದ ಕ್ರಿಸ್ತನ ವಿಷಯವಾಗಿ ಬೋಧಿಸುತ್ತಾರೆ. ಅವರ ಸುವಾರ್ತಾಸೇವೆಯ ಉದ್ದೇಶವೇ ತಪ್ಪಾಗಿದೆ. ಸೆರೆಯಲ್ಲಿರುವ ನನಗೆ ತೊಂದರೆ ಮಾಡಬೇಕೆಂಬುದೇ ಅವರ ಅಪೇಕ್ಷೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ಬೇರೆ ತರದವರಾದರೋ ನಾನು ಬೇಡಿಯಿಂದ ಬಂಧಿತನಾಗಿರುವಾಗಲೂ ನನಗೆ ಸಂಕಟವನ್ನು ಹೆಚ್ಚಿಸಬೇಕೆಂದು ಯೋಚಿಸಿ, ಪ್ರಾಮಾಣಿಕವಲ್ಲದ ಸ್ವಾರ್ಥ ಉದ್ದೇಶದಿಂದ ಕ್ರಿಸ್ತನನ್ನು ಪ್ರಸಿದ್ಧಿಪಡಿಸುತ್ತಾರೆ.
Kannada BSI Bible 2016
ಇವರಾದರೋ ನಾನು ಸುವಾರ್ತೆಯ ಪರವಾಗಿ ನೇಮಿಸಲ್ಪಟ್ಟಿದ್ದೇನೆಂದು ತಿಳಿದು ಪ್ರೀತಿಯಿಂದ ಸಾರುತ್ತಾರೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆ ಬೇರೆ ತರದವರಾದರೋ ನಾನು ಬೇಡಿಬಿದ್ದಿರುವಾಗಲೂ ನನಗೆ ಸಂಕಟವನ್ನು ಎಬ್ಬಿಸಬೇಕೆಂದು ಯೋಚಿಸಿ ಕ್ರಿಸ್ತನನ್ನು ಯಥಾರ್ಥವಾಗಿ ಪ್ರಸಿದ್ಧಿಪಡಿಸದೆ ಕಕ್ಷಿಭಾವದಿಂದ ಪ್ರಸಿದ್ಧಿಪಡಿಸುತ್ತಾರೆ.
Kannada Bible (KNCL) BSI 2016
ಆ ಕೆಲವರಾದರೋ ಸ್ವಾರ್ಥಸಾಧನೆಗಾಗಿಯೇ ಹೊರತು ಪ್ರಾಮಾಣಿಕರಾಗಿ ಕ್ರಿಸ್ತಯೇಸುವನ್ನು ಸಾರುತ್ತಿಲ್ಲ. ಸೆರೆಯಲ್ಲಿರುವ ನನ್ನನ್ನು ಇನ್ನೂ ಹೆಚ್ಚಿನ ಕಷ್ಟಕ್ಕೆ ಗುರಿಮಾಡಬೇಕೆಂಬುದೇ ಅವರ ಉದ್ದೇಶ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರಾದರೋ, ನಾನು ಬೇಡಿಗಳಿಂದ ಸೆರೆಮನೆಯಲ್ಲಿರುವಾಗ ಸಂಕಟವನ್ನು ಹೆಚ್ಚಿಸಬೇಕೆಂದು ಯೋಚಿಸಿ ಕ್ರಿಸ್ತನನ್ನು ಯಥಾರ್ಥವಾಗಿ ಪ್ರಸಿದ್ಧ ಪಡಿಸದೆ ಪ್ರತಿಸ್ಪರ್ಧೆಗಾಗಿ ಸಾರುತ್ತಾರೆ.