Philippians 3:12 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಈಗಾಗಲೇ ನಾನು ಇದೆಲ್ಲವನ್ನು ಸಾಧಿಸಿ ಪರಿಪೂರ್ಣತೆಯನ್ನು ಗಳಿಸಿದ್ದೇನೆ ಎಂದು ಹೇಳುತ್ತಿಲ್ಲ. ನಾನು ಆ ಗುರಿಯನ್ನು ಇನ್ನೂ ಮುಟ್ಟಿಲ್ಲ. ಆದರೆ ಆ ಗುರಿಯನ್ನು ಮುಟ್ಟಿ ಅದನ್ನು ನನ್ನದಾಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಇದು ಕ್ರಿಸ್ತನ ಅಪೇಕ್ಷೆ. ಆದಕಾರಣವೇ, ಕ್ರಿಸ್ತನು ನನ್ನನ್ನು ತನ್ನವನನ್ನಾಗಿ ಮಾಡಿಕೊಂಡನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇಷ್ಟರೊಳಗೆ ನಾನಿದೆಲ್ಲವನ್ನೂ ಪಡಕೊಂಡು ಪರಿಪೂರ್ಣತೆಗೆ ಬಂದವನೆಂದು ಹೇಳುವುದಿಲ್ಲ. ಆದರೆ ನಾನು ಯಾವುದನ್ನು ಹೊಂದುವುದಕ್ಕಾಗಿ ಕ್ರಿಸ್ತ ಯೇಸುವು ನನ್ನನ್ನು ಹಿಡಿದುಕೊಂಡನೋ ಅದನ್ನು ಹೊಂದುವುದಕ್ಕೋಸ್ಕರ ಪ್ರಯತ್ನಿಸುತ್ತಾ ಇದ್ದೇನೆ.
Kannada BSI Bible 2016
ಇಷ್ಟ ರೊಳಗೆ ನಾನು ಪಡಕೊಂಡು ಸಿದ್ಧಿಗೆ ಬಂದವನೆಂದು ಹೇಳುವದಿಲ್ಲ; ನಾನು ಯಾವದನ್ನು ಹೊಂದುವದಕ್ಕಾಗಿ ಕ್ರಿಸ್ತ ಯೇಸು ನನ್ನನ್ನು ಹಿಡಿದುಕೊಂಡನೊ ಅದನ್ನು ಹಿಡಿದುಕೊಳ್ಳುವದಕ್ಕೋಸ್ಕರ ಹಿಂದಟ್ಟುತ್ತಾ ಇದ್ದೇನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಇಷ್ಟರೊಳಗೆ ನಾನು ಬಿರುದನ್ನು ಪಡಕೊಂಡು ಸಿದ್ಧಿಗೆ ಬಂದವನೆಂದು ಹೇಳುವದಿಲ್ಲ; ನಾನು ಯಾವದನ್ನು ಹೊಂದುವದಕ್ಕಾಗಿ ಕ್ರಿಸ್ತ ಯೇಸು ನನ್ನನ್ನು ಹಿಡಿದುಕೊಂಡನೋ ಅದನ್ನು ಹಿಡಿದುಕೊಳ್ಳುವದಕ್ಕೋಸ್ಕರ ಓಡುತ್ತಾ ಇದ್ದೇನೆ.
Kannada Bible (KNCL) BSI 2016
ಈಗಾಗಲೇ ನಾನಿದೆಲ್ಲವನ್ನೂ ಸಾಧಿಸಿದ್ದೇನೆ, ಪರಿಪೂರ್ಣತೆಯನ್ನು ಗಳಿಸಿದ್ದೇನೆ ಎಂದು ನೀವು ಭಾವಿಸಬಾರದು. ಕ್ರಿಸ್ತಯೇಸು ನನ್ನನ್ನು ಯಾವುದಕ್ಕಾಗಿ ತಮ್ಮವನನ್ನಾಗಿ ಮಾಡಿಕೊಂಡರೋ, ಅದನ್ನು ನನ್ನದಾಗಿಸಿಕೊಳ್ಳಲು ನಾನು ಪ್ರಯತ್ನಿಸುತ್ತಿದ್ದೇನೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದನ್ನೆಲ್ಲಾ ನಾನು ಸಾಧಿಸಿದ್ದೇನೆಂದಲ್ಲ ಅಥವಾ ಈಗಲೇ ನಾನು ಪರಿಪೂರ್ಣನಾಗಿದ್ದೇನೆಂದೂ ನಾನು ಹೇಳುತ್ತಾ ಇಲ್ಲ. ಆದರೆ ಕ್ರಿಸ್ತ ಯೇಸು ನನ್ನನ್ನು ಅನುಸರಿಸಬೇಕೆಂದು ಯಾವುದಕ್ಕಾಗಿ ಆರಿಸಿಕೊಂಡರೋ, ಆ ಪೂರ್ಣತೆಯೆಡೆಗೆ ತಲುಪುವಂತೆ ನಾನು ಪರಿಶ್ರಮಿಸುತ್ತಿದ್ದೇನೆ.