Proverbs 11:31 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಶಿಷ್ಟರು ಭೂಮಿಯ ಮೇಲೆ ಪ್ರತಿಫಲವನ್ನು ಹೊಂದುವುದಾದರೆ ಕೆಡುಕರು ಸಹ ತಮಗೆ ಬರತಕ್ಕ ದಂಡನೆಯನ್ನು ಹೊಂದುವುದು ನಿಶ್ಚಯ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಶಿಷ್ಟನು ಭೂಮಿಯಲ್ಲಿ ತನ್ನ ಕ್ರಿಯಾಫಲವನ್ನು ಅನುಭವಿಸುವಲ್ಲಿ, ದುಷ್ಟನೂ, ಪಾಪಿಯೂ ದಂಡನೆಯನ್ನು ಅನುಭವಿಸುವರು ಎಂದು ಹೇಳಬೇಕಾಗಿಲ್ಲ.
Kannada BSI Bible 2016
ಇಗೋ, ಭೂಮಿಯ ಮೇಲೆ ನೀತಿವಂತರು ಪ್ರತಿಫಲವನ್ನು ಹೊಂದುವರು; ದುಷ್ಟನೂ ಪಾಪಿಯೂ ಎಷ್ಟೋ ಹೆಚ್ಚಾಗಿ ಪ್ರತಿಫಲ ವನ್ನು ಹೊಂದುತ್ತಾರೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಶಿಷ್ಟನೇ ಭೂವಿುಯಲ್ಲಿ ತನ್ನ ಕ್ರಿಯಾಫಲವನ್ನು ಅನುಭವಿಸುವಲ್ಲಿ ದುಷ್ಟನೂ ಪಾಪಿಯೂ ಅನುಭವಿಸುವರು ಎಂದು ಹೇಳಬೇಕಾಗಿಲ್ಲ.
Kannada Bible (KNCL) BSI 2016
ಸಜ್ಜನರೇ ಜಗದೊಳು ತಮ್ಮ ಕರ್ಮದ ಫಲವನ್ನು ಅನುಭವಿಸುವಲ್ಲಿ; ಹೇಳಬೇಕೆ ಇನ್ನು ದುರ್ಜನರ, ಹಾಗೂ ಪಾಪಿಗಳ ಪರಿಸ್ಥಿತಿ?
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇಗೋ, ಭೂಮಿಯ ಮೇಲೆ ನೀತಿವಂತರು ತಮ್ಮ ಫಲವನ್ನು ಹೊಂದಲಿಕ್ಕಿರುವಾಗ, ದುಷ್ಟರು ಮತ್ತು ಪಾಪಿಗಳು ಎಷ್ಟೋ ಹೆಚ್ಚಾಗಿ ತಮ್ಮ ಫಲವನ್ನು ಹೊಂದುತ್ತಾರೆ.