Proverbs 13:7 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಕೆಲವರು ಐಶ್ವರ್ಯವಂತರಂತೆ ನಟಿಸುತ್ತಾರೆ, ಆದರೆ ಅವರಲ್ಲೇನೂ ಇರುವುದಿಲ್ಲ. ಕೆಲವರು ಬಡವರಂತೆ ವರ್ತಿಸುತ್ತಾರೆ. ಆದರೆ ಅವರು ನಿಜವಾಗಿಯೂ ಐಶ್ವರ್ಯವಂತರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಒಬ್ಬನು ಧನವನ್ನು ಸಂಗ್ರಹಿಸಿದರೂ, ಏನೂ ಇಲ್ಲದ ದರಿದ್ರನ ಹಾಗೆ ವರ್ತಿಸುತ್ತಾನೆ, ಮತ್ತೊಬ್ಬನು ಧನವನ್ನೆಲ್ಲಾ ವೆಚ್ಚಮಾಡಿ ಬಡವನಾದರೂ, ಬಹು ಐಶ್ವರ್ಯವಂತನ ಹಾಗೆ ವರ್ತಿಸುತ್ತಾನೆ.
Kannada BSI Bible 2016
ತನ್ನನ್ನು ತಾನೇ ಐಶ್ವರ್ಯವಂತನಾಗಿ ಮಾಡಿಕೊಳ್ಳುವವನು ಇದ್ದಾನೆ; ಅವನಿಗೆ ಏನೂ ಇರು ವದಿಲ್ಲ. ತನ್ನನ್ನು ಬಡವನಾಗಿ ಮಾಡಿಕೊಳ್ಳುವವನಿ ದ್ದಾನೆ; ಅವನಿಗೆ ಎಷ್ಟೋ ಐಶ್ವರ್ಯವಿದೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಒಬ್ಬನು ಧನವನ್ನು ಸಂಗ್ರಹಿಸಿದರೂ ಏನೂ ಇಲ್ಲದ ದರಿದ್ರನೇ; ಮತ್ತೊಬ್ಬನು ಧನವನ್ನೆಲ್ಲಾ ವ್ಯಯಮಾಡಿ ಬಡವನಾದರೂ ಬಹು ಐಶ್ವರ್ಯವಂತನೇ.
Kannada Bible (KNCL) BSI 2016
ಒಬ್ಬ ಹಣಕೂಡಿಸಿದ್ದರೂ ಘನದರಿದ್ರನಿರಬಹುದು; ಮತ್ತೊಬ್ಬ ಹಣವೆಚ್ಚಮಾಡಿ ಕಡುಬಡವನಾಗಿದ್ದರೂ ಐಶ್ವರ್ಯವಂತನಾಗಿರಬಹುದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಬಡವನಾಗಿದ್ದರೂ ಐಶ್ವರ್ಯವಂತನಾಗಿ ನಟಿಸುವವನು ಇದ್ದಾನೆ; ಮತ್ತೊಬ್ಬನು ದರಿದ್ರನಾಗಿ ಕಾಣಿಸಿದರೂ ಬಹು ಸಿರಿವಂತನೇ.