Proverbs 14:10 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅವನವನ ವ್ಯಥೆಯು ಅವನವನಿಗೆ ಮಾತ್ರ ತಿಳಿದಿದೆ. ಹಾಗೆಯೇ ಅವನವನ ಸಂತೋಷವು ಅವನವನಿಗೆ ಮಾತ್ರ ತಿಳಿದಿರುತ್ತದೆ
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಪ್ರತಿಯೊಬ್ಬನು ತನ್ನ ಹೃದಯದ ವ್ಯಾಕುಲವನ್ನು ತಾನು ಗ್ರಹಿಸಿಕೊಳ್ಳುವನು, ಅವನ ಆನಂದದಲ್ಲಿಯೂ ಬೇರೆಯವರು ಪಾಲುಗಾರರಾಗುವುದಿಲ್ಲ.
Kannada BSI Bible 2016
ಹೃದಯಕ್ಕೆ ತನ್ನ ವ್ಯಾಕುಲ ತೆಯು ತಿಳಿಯುತ್ತದೆ; ಪರನು ತನ್ನ ಸಂತೋಷದಲ್ಲಿ ಸೇರುವದಿಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ಪ್ರತಿಯೊಬ್ಬನು ತನ್ನ ಹೃದಯದ ವ್ಯಾಕುಲವನ್ನು ತಾನು ಗ್ರಹಿಸಿಕೊಳ್ಳುವನು; ಅವನ ಆನಂದದಲ್ಲಿಯೂ ಯಾರೂ ಪಾಲುಗಾರರಾಗುವದಿಲ್ಲ.
Kannada Bible (KNCL) BSI 2016
ಆಯಾಯ ಹೃದಯಕ್ಕೆ ಗೊತ್ತು ಅದರ ಗೋಳು; ಅದರ ಸಂತೋಷದಲ್ಲೂ ಪಾಲುಗೊಳ್ಳಲಾಗದು ಬೇರೆಯವರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹೃದಯಕ್ಕೆ ತನ್ನ ವ್ಯಥೆಯು ಗೊತ್ತು; ಪರನು ಅದರ ಸಂತೋಷದಲ್ಲಿ ಪಾಲಾಗುವುದಿಲ್ಲ.