Proverbs 18:20 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಒಬ್ಬನು ತಾನು ಹೇಳಿದ ಒಳ್ಳೆಯದಕ್ಕೇ ಆಗಲಿ ಕೆಟ್ಟದ್ದಕ್ಕೇ ಆಗಲಿ ಪ್ರತಿಫಲವನ್ನು ಪಡೆಯಲೇಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಮನುಷ್ಯನು ತನ್ನ ಬಾಯಿಯ ಬೆಳೆಯನ್ನು ಹೊಟ್ಟೆ ತುಂಬಾ ಉಣ್ಣುವನು, ತನ್ನ ತುಟಿಗಳ ಫಲವನ್ನು ಸಾಕಷ್ಟು ತಿನ್ನುವನು.
Kannada BSI Bible 2016
ತನ್ನ ಬಾಯಿಯ ಫಲದಿಂದ ಮನುಷ್ಯನ ಹೊಟ್ಟೆಯು ತೃಪ್ತಿಹೊಂದುವದು; ತನ್ನ ತುಟಿಗಳ ಆದಾ ಯದಿಂದ ಅವನು ತೃಪ್ತಿಹೊಂದುವನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಮನುಷ್ಯನು ತನ್ನ ಬಾಯ ಬೆಳೆಯನ್ನು ಹೊಟ್ಟೆತುಂಬಾ ಉಣ್ಣುವನು; ತನ್ನ ತುಟಿಗಳ ಫಲವನ್ನು ಸಾಕಾದಷ್ಟು ತಿನ್ನುವನು.
Kannada Bible (KNCL) BSI 2016
ಬಾಯಿ ಬಿತ್ತಿದ ಬೆಳೆಯಿಂದ ಮನುಷ್ಯ ಹೊಟ್ಟೆ ತುಂಬುವನು; ತುಟಿಗಳು ಕೊಟ್ಟ ಫಲದಿಂದ ತಿಂದು ತೇಗುವನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ತನ್ನ ಬಾಯಿಯ ಫಲದಿಂದ ಮನುಷ್ಯನ ಹೊಟ್ಟೆಯು ತೃಪ್ತಿ ಹೊಂದುವುದು; ತನ್ನ ತುಟಿಗಳ ಆದಾಯದಿಂದ ಅವನು ತೃಪ್ತಿಹೊಂದುವನು.