Proverbs 21:6 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನೀನು ಮೋಸದಿಂದ ಐಶ್ವರ್ಯವಂತನಾದರೆ, ಆ ಐಶ್ವರ್ಯವು ಬಹುಬೇಗನೆ ಇಲ್ಲವಾಗುತ್ತದೆ. ನಿನ್ನ ಐಶ್ವರ್ಯವು ನಿನ್ನನ್ನು ಮರಣಕ್ಕೆ ನಡೆಸುತ್ತದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಸುಳ್ಳಿನಿಂದ ಸಿಕ್ಕಿದ ಸಂಪತ್ತು ಹಬೆಯಂತೆ ಅಸ್ಥಿರ, ಮೃತ್ಯುಪಾಶದಂತೆ ನಾಶಕರ.
Kannada BSI Bible 2016
ಸುಳ್ಳಿನ ನಾಲಿಗೆಯಿಂದ ಸಂಪಾ ದಿಸುವ ಸಂಪತ್ತು ಮೃತ್ಯುವನ್ನು ಹುಡುಕುವವರಿಂದ ಬಡಿಯಲ್ಪಟ್ಟ ವ್ಯರ್ಥತ್ವವಾಗಿದೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಸುಳ್ಳಿನಿಂದ ಸಿಕ್ಕಿದ ಸಂಪತ್ತು ಹಬೆಯಂತೆ ಅಸ್ಥಿರ, ಮೃತ್ಯುಪಾಶದಂತೆ [ನಾಶಕರ].
Kannada Bible (KNCL) BSI 2016
ಹಬೆಯಂತೆ ನಾಪತ್ತೆ ಸುಳ್ಳಿನಿಂದ ಸಿಕ್ಕಿದ ಸಂಪತ್ತು; ಮೃತ್ಯುಪಾಶದಂತೆ ಅದೊಂದು ವಿಪತ್ತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಸುಳ್ಳಿನ ನಾಲಿಗೆಯಿಂದ ಸಂಪಾದಿಸಿದ ಸಂಪತ್ತು ಕ್ಷಣಿಕ ಆವಿಯಂತೆಯೂ ಮೃತ್ಯುಪಾಶದಂತೆಯೂ ಆಗಿದೆ.