Proverbs 22:11 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನೀನು ಶುದ್ಧಹೃದಯವನ್ನೂ ಸವಿಮಾತುಗಳನ್ನೂ ಪ್ರೀತಿಸಿದರೆ ರಾಜನು ನಿನಗೆ ಸ್ನೇಹಿತನಾಗುವನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹೃದಯಶುದ್ಧಿಯನ್ನು ಅಪೇಕ್ಷಿಸುವ ಮತ್ತು ಸವಿಮಾತನಾಡುವ ಮನುಷ್ಯನಿಗೆ ರಾಜನ ಸ್ನೇಹವು ದೊರೆಯುವುದು.
Kannada BSI Bible 2016
ಹೃದಯ ಶುದ್ಧಿಯನ್ನು ಪ್ರೀತಿಸುವವನಿಗೆ ತನ್ನ ತುಟಿಗಳ ಕೃಪೆಗಾಗಿ ಅರಸನು ಅವನಿಗೆ ಸ್ನೇಹಿತ ನಾಗಿರುವನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಹೃದಯಶುದ್ಧಿಯನ್ನಪೇಕ್ಷಿಸುವ ಸವಿಮಾತಾಡುವ ಮನುಷ್ಯನಿಗೆ ರಾಜನ ಸ್ನೇಹವು ದೊರೆಯುವದು.
Kannada Bible (KNCL) BSI 2016
ಸವಿಮಾತಿನಿಂದ ಅರಸನ ಗೆಳೆತನ ಪಡೆಯಬಹುದು; ಸರ್ವೇಶ್ವರ ಬಯಸುವುದು ಅಂತರಂಗ ಶುದ್ಧಿಯನ್ನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಶುದ್ಧ ಹೃದಯವನ್ನು ಪ್ರೀತಿಸಿ, ಕೃಪೆಯಿಂದ ಮಾತನಾಡುವವನಿಗೆ ಅರಸನು ಸ್ನೇಹಿತನಾಗಿರುವನು.