Proverbs 22:27 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನೀನು ಅವನ ಸಾಲವನ್ನು ತೀರಿಸಲಾಗದಿದ್ದರೆ, ನಿನ್ನಲ್ಲಿರುವ ಪ್ರತಿಯೊಂದನ್ನು ಕಳೆದುಕೊಳ್ಳುವೆ. ನಿನ್ನ ಹಾಸಿಗೆಯನ್ನು ನೀನೇಕೆ ಕಳೆದುಕೊಳ್ಳಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ಸಾಲವನ್ನು ತೀರಿಸುವುದಕ್ಕೆ ನಿನ್ನಿಂದಾಗದಿರಲು, ಸಾಲಕೊಟ್ಟವನು ನಿನ್ನ ಕೆಳಗಿನ ಹಾಸಿಗೆಯನ್ನು ಕಿತ್ತುಹಾಕುವುದು ಬೇಕೇ?
Kannada BSI Bible 2016
ಸಲ್ಲಿಸುವದಕ್ಕೆ ನಿನಗೆ ಏನೂ ಇಲ್ಲದೆ ಹೋದರೆ ನಿನ್ನ ಕೆಳಗಿನ ಹಾಸಿಗೆಯನ್ನು ಅವನು ತೆಗೆದು ಕೊಂಡು ಹೋಗುವದು ಯಾಕೆ?
Kannada BSI JV (ಕನ್ನಡ ಸತ್ಯವೇದವು J.V. (BSI))
ಆ ಸಾಲವನ್ನು ತೀರಿಸುವದಕ್ಕೆ ನಿನ್ನಿಂದಾಗದಿರಲು ಸಾಲಕೊಟ್ಟವನು ನಿನ್ನ ಕೆಳಗಿನ ಹಾಸಿಗೆಯನ್ನು ಕಿತ್ತುಹಾಕುವನಲ್ಲವೆ, ಇದೇಕೆ?
Kannada Bible (KNCL) BSI 2016
ಆ ಸಾಲ ತೀರಿಸಲು ನಿನ್ನಿಂದ ಸಾಧ್ಯವಾಗದಿರಲು, ಅವನೇಕೆ ನೀನು ಮಲಗಿರುವ ಹಾಸಿಗೆಯನ್ನೇ ಕಿತ್ತುಕೊಳ್ಳಬೇಕು?
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಸಾಲ ತೀರಿಸಲು ನಿನಗೆ ಏನೂ ಇಲ್ಲದೆ ಹೋದರೆ ನಿನ್ನ ಕೆಳಗಿನ ಹಾಸಿಗೆಯನ್ನು ಅವನು ತೆಗೆದುಕೊಂಡು ಹೋಗುವನಲ್ಲವೇ?