Proverbs 22:29 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಚತುರ ಕೆಲಸಗಾರನು ರಾಜರ ಸೇವೆಗೆ ಯೋಗ್ಯನಾಗಿದ್ದಾನೆ. ಅವನು ಸಾಮಾನ್ಯರ ಸೇವೆ ಮಾಡಬೇಕಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ತನ್ನ ಕೆಲಸದಲ್ಲಿ ಚಾತುರ್ಯವುಳ್ಳವನನ್ನು ನೋಡು, ಇಂಥವನು ರಾಜನ ಸನ್ನಿಧಿಯಲ್ಲಿ ನಿಲ್ಲುವನೇ ಹೊರತು, ಸಾಮಾನ್ಯ ಜನರ ಮುಂದೆ ಅಲ್ಲ.
Kannada BSI Bible 2016
ತನ್ನ ಕೆಲಸದಲ್ಲಿ ಶ್ರದ್ಧೆಯುಳ್ಳವನನ್ನು ನೀನು ನೋಡಿ ದ್ದೀಯಾ? ಅವನು ನೀಚರ ಮುಂದೆ ಅಲ್ಲ, ಅರಸರ ಮುಂದೆಯೇ ನಿಲ್ಲುವನು.
Kannada BSI JV (ಕನ್ನಡ ಸತ್ಯವೇದವು J.V. (BSI))
ತನ್ನ ಕೆಲಸದಲ್ಲಿ ಚಟುವಟಿಕೆಯಾಗಿರುವವನನ್ನು ನೋಡು; ಇಂಥವನು ರಾಜರನ್ನು ಸೇವಿಸುವನಲ್ಲದೆ ನೀಚರನ್ನು ಸೇವಿಸುವದಿಲ್ಲ.
Kannada Bible (KNCL) BSI 2016
ತನ್ನ ಕೆಲಸದಲ್ಲಿ ನಿಪುಣನಾದವನನ್ನು ಗುರುತುಹಚ್ಚು; ಅಂಥವನು ರಾಜರನ್ನಲ್ಲದೆ ನೀಚರನ್ನು ಸೇವಿಸಲಾರನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ತನ್ನ ಕೆಲಸದಲ್ಲಿ ಶ್ರದ್ಧೆಯುಳ್ಳವನನ್ನು ನೀನು ನೋಡಿದ್ದೀಯಾ? ಅವನು ನೀಚರ ಮುಂದೆ ಅಲ್ಲ, ಅರಸರ ಮುಂದೆಯೇ ಸೇವೆ ಸಲ್ಲಿಸುವನು.