Proverbs 25:20 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ವ್ಯಸನದಿಂದಿರುವವನಿಗೆ ಸಂತಸದ ಗೀತೆಗಳನ್ನು ಹಾಡಿದರೆ ಚಳಿಯಲ್ಲಿರುವವನ ಬಟ್ಟೆಯನ್ನು ತೆಗೆದುಹಾಕಿದಂತೆಯೂ ಗಾಯದ ಮೇಲೆ ಹುಳಿರಸವನ್ನು ಸುರಿದಂತೆಯೂ ಇರುವುದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಮನಗುಂದಿದವನಿಗೆ ಸಂಗೀತಹಾಡುವುದು ಚಳಿದಿನದಲ್ಲಿ ಬಟ್ಟೆ ತೆಗೆದಂತೆ, ಗಾಯಕ್ಕೆ ಹುಳಿಹೊಯ್ದಂತೆ.
Kannada BSI Bible 2016
ಚಳಿಯಲ್ಲಿ ಬಟ್ಟೆಯನ್ನು ತೆಗೆದುಹಾಕುವವನು ಸೋಡಾಉಪ್ಪಿನ ಹುಳಿಯ ಹಾಗೆಯೇ ಮನಗುಂದಿದವನಿಗೆ ಸಂಗೀತಗ ಳನ್ನು ಹಾಡುವನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಮನಗುಂದಿದವನಿಗೆ ಸಂಗೀತಹಾಡುವದು ಚಳಿದಿನದಲ್ಲಿ ಬಟ್ಟೆ ತೆಗೆದ ಹಾಗೂ ಸೋಡ ಉಪ್ಪಿಗೆ ಹುಳಿಹೊಯ್ದ ಹಾಗೂ.
Kannada Bible (KNCL) BSI 2016
ಮನಗುಂದಿದವನಿಗೆ ಸಂಗೀತ ಹಾಡುವುದೆಂದರೆ ಚಳಿಯಲ್ಲಿ ಬಟ್ಟೆ ಬಿಚ್ಚಿದ ಹಾಗೆ, ಉರಿಗಾಯಕ್ಕೆ ಉಪ್ಪು ಹಚ್ಚಿದಂತೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಮನಗುಂದಿದವನಿಗೆ ಸಂಗೀತ ಹಾಡುವುದು ಚಳಿಯಲ್ಲಿ ಬಟ್ಟೆ ಬಿಚ್ಚಿದ ಹಾಗೆಯೂ ಹುಳಿ ಉಪ್ಪನ್ನು ಗಾಯಕ್ಕೆ ಹಚ್ಚಿದಂತೆಯೂ.