Proverbs 26:25 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅವನು ಹೇಳುವ ಸಂಗತಿಗಳು ಒಳ್ಳೆಯದಾಗಿ ಕಂಡರೂ ಅವನನ್ನು ನಂಬಬೇಡಿ. ಅವನ ಹೃದಯವು ಕೆಟ್ಟ ಆಲೋಚನೆಗಳಿಂದ ತುಂಬಿದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಸವಿಮಾತನಾಡಿದರೂ ಅವನನ್ನು ನಂಬಬೇಡ, ಅವನ ಹೃದಯದಲ್ಲಿ ಎಷ್ಟೋ ಹೇಯ ಕೃತ್ಯಗಳು.
Kannada BSI Bible 2016
ಸವಿ ಮಾತನ್ನಾಡಿದರೆ ಅವನನ್ನು ನಂಬಬೇಡ; ಅವನ ಹೃದಯದಲ್ಲಿ ಏಳು ಅಸಹ್ಯಗಳಿವೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಸವಿಮಾತಾಡಿದರೂ ಅವನನ್ನು ನಂಬಬೇಡ, ಅವನ ಹೃದಯದಲ್ಲಿ ಎಷ್ಟೋ ಅಸಹ್ಯಗಳು;
Kannada Bible (KNCL) BSI 2016
ಹಗೆಗಾರ ಸವಿನುಡಿದರೂ ನಂಬಬೇಡ; ಹೃದಯದಲ್ಲಿದೆ ಏಳ್ಮಡಿ ಹೇಯ ಕೃತ್ಯ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನ ಹಗೆತನವು ಮೋಸದಿಂದ ಮುಚ್ಚಲ್ಪಟ್ಟಿದ್ದರೂ, ಅವನ ಕೆಟ್ಟತನವು ಸಭೆಯಲ್ಲಿ ಬಯಲಾಗುವುದು.