Proverbs 29:17 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಿನ್ನ ಮಗನನ್ನು ತಿದ್ದಿ ಸರಿಪಡಿಸು; ಆಗ ನೀನು ಅವನ ಬಗ್ಗೆ ಹೆಮ್ಮೆಯಿಂದಿರುವೆ. ಅವನು ನಿನ್ನನ್ನು ತೃಪ್ತಿಪಡಿಸುವನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಮಗನನ್ನು ಶಿಕ್ಷಿಸು, ಅವನು ನಿನ್ನನ್ನು ಸಂತೋಷಪಡಿಸುವನು, ಅವನೇ ನಿನ್ನ ಆತ್ಮಕ್ಕೆ ಮೃಷ್ಟಾನ್ನವಾಗುವನು.
Kannada BSI Bible 2016
ನಿನ್ನ ಮಗನನ್ನು ಶಿಕ್ಷಿಸಿದರೆ ಅವ ನಿಂದ ನಿನಗೆ ನೆಮ್ಮದಿಯಾಗುವದು; ಹೌದು, ಅವನು ನಿನ್ನ ಪ್ರಾಣಕ್ಕೆ ಆನಂದವನ್ನುಂಟು ಮಾಡುವನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಮಗನನ್ನು ಶಿಕ್ಷಿಸು; ನಿನ್ನನ್ನು ಸುಧಾರಿಸುವನು; ಅವನೇ ನಿನ್ನ ಆತ್ಮಕ್ಕೆ ಮೃಷ್ಟಾನ್ನವಾಗುವನು.
Kannada Bible (KNCL) BSI 2016
ನಿನ್ನ ಮಗನನ್ನು ದಂಡಿಸಿ ಸರಿಪಡಿಸು; ಅವನು ನಿನ್ನನ್ನು ಸಂತೋಷಪಡಿಸುವನು, ಮನೋಲ್ಲಾಸಗೊಳಿಸುವನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಿನ್ನ ಮಕ್ಕಳನ್ನು ಶಿಕ್ಷಿಸಿದರೆ, ಅವರು ನಿನಗೆ ಮನಶಾಂತಿಯನ್ನು ಕೊಡುವರು; ಹೌದು, ಅವರು ನೀನು ಬಯಸುವ ಹರ್ಷವನ್ನು ನಿನಗೆ ತರುವರು.