Proverbs 29:3 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಜ್ಞಾನವನ್ನು ಪ್ರೀತಿಸುವವನ ತಂದೆ ಬಹು ಸಂತೋಷವಾಗಿರುವನು. ಆದರೆ ಸೂಳೆಯರ ಸಹವಾಸ ಮಾಡುವವನು ತನ್ನ ಐಶ್ವರ್ಯವನ್ನು ಕಳೆದುಕೊಳ್ಳುವನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಜ್ಞಾನವನ್ನು ಪ್ರೀತಿಸುವವನು ತಂದೆಯನ್ನು ಹರ್ಷಗೊಳಿಸುವನು, ವೇಶ್ಯೆಯ ಸಂಗಡಿಗನು ಆಸ್ತಿಯನ್ನು ಹಾಳುಮಾಡಿಕೊಳ್ಳುವನು.
Kannada BSI Bible 2016
ಜ್ಞಾನವನ್ನು ಪ್ರೀತಿಸುವವನು ತನ್ನ ತಂದೆಯನ್ನು ಹರ್ಷಗೊಳಿಸುತ್ತಾನೆ; ವೇಶ್ಯೆಯ ರೊಂದಿಗೆ ಸಹವಾಸ ಮಾಡುವವನು ತನ್ನ ಆಸ್ತಿಯನ್ನು ವೆಚ್ಚಮಾಡುತ್ತಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಜ್ಞಾನಾಸಕ್ತನು ತಂದೆಯನ್ನು ಹರ್ಷಗೊಳಿಸುವನು; ವೇಶ್ಯಾಸಂಗಿಯು ಆಸ್ತಿಯನ್ನು ಹಾಳುಮಾಡಿಕೊಳ್ಳುವನು.
Kannada Bible (KNCL) BSI 2016
ಜ್ಞಾನಪ್ರಿಯ ಮಗನಿಂದ ತಂದೆಗೆ ಸಂತೋಷ; ವೇಶ್ಯೆಯರ ಸಂಗದಿಂದ ಆಸ್ತಿ ವಿನಾಶ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಜ್ಞಾನಪ್ರಿಯನು ತಂದೆಗೆ ಆನಂದ ಆದರೆ ವೇಶ್ಯೆಯರ ಸಹವಾಸದಿಂದ ಆಸ್ತಿಯ ವಿನಾಶ.