Proverbs 30:4 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಎಂದಾದರೂ ಪರಲೋಕಕ್ಕೆ ಏರಿಹೋಗಿ ಇಳಿದುಬಂದವನು ಯಾರು? ಗಾಳಿಯನ್ನು ತನ್ನ ಕೈಯಲ್ಲಿ ಹಿಡಿದವನು ಯಾರು? ತನ್ನ ಉಡುಪಿನಲ್ಲಿ ಸಮುದ್ರವನ್ನು ಮೂಟೆಕಟ್ಟಿದವನು ಯಾರು? ಭೂಮಿಗೆ ಮೇರೆಗಳನ್ನು ಹಾಕಿದವನು ಯಾರು? ಈ ಕಾರ್ಯಗಳನ್ನು ಯಾವನಾದರೂ ಮಾಡಿದ್ದರೆ, ಅವನು ಯಾರು? ಅವನು ಕುಟುಂಬ ಎಲ್ಲಿದೆ?
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಕಾಶಕ್ಕೆ ಏರಿ ಇಳಿದಿರುವವನಾರು? ಮುಷ್ಠಿಯಲ್ಲಿ ಗಾಳಿಯನ್ನು ಕೂಡಿಸಿರುವವರು ಯಾರು? ತನ್ನ ಬಟ್ಟೆಯಲ್ಲಿ ನೀರನ್ನು ಮೂಟೆಕಟ್ಟಿರುವವರು ಯಾರು? ಭೂಮಿಯ ಎಲ್ಲೆಗಳನ್ನೆಲ್ಲಾ ಸ್ಥಾಪಿಸಿರುವವರು ಯಾರು? ಅವನ ಹೆಸರೇನು? ಅವನ ಮಗನ ಹೆಸರೇನು? ನೀನೇ ಬಲ್ಲವನು.
Kannada BSI Bible 2016
ಆಕಾಶಕ್ಕೆ ಏರಿದವನು ಇಲ್ಲವೆ ಇಳಿದವನು ಯಾರು? ತನ್ನ ಮುಷ್ಟಿಗಳಲ್ಲಿ ಗಾಳಿಯನ್ನು ಕೂಡಿಸಿದವನಾರು? ವಸ್ತ್ರದಲ್ಲಿ ನೀರನ್ನು ಕಟ್ಟಿದವ ನಾರು? ಭೂಮಿಯ ಕೊನೆಗಳನ್ನೆಲ್ಲಾ ಸ್ಥಾಪಿಸಿದವ ನಾರು? ನೀನು ಹೇಳುವದಾದರೆ ಆತನ ಹೆಸರೇನು? ಆತನ ಮಗನ ಹೆಸರೇನು?
Kannada BSI JV (ಕನ್ನಡ ಸತ್ಯವೇದವು J.V. (BSI))
ಆಕಾಶಕ್ಕೆ ಏರಿ ಇಳಿದಿರುವವನಾರು? ಮುಷ್ಟಿಯಲ್ಲಿ ಗಾಳಿಯನ್ನು ಕೂಡಿಸಿರುವವರು ಯಾರು? ತನ್ನ ಬಟ್ಟೆಯಲ್ಲಿ ನೀರನ್ನು ಮೂಟೆಕಟ್ಟಿರುವವರು ಯಾರು? ಭೂವಿುಯ ಎಲ್ಲೆಗಳನ್ನೆಲ್ಲಾ ಸ್ಥಾಪಿಸಿರುವವರು ಯಾರು? ಅವನ ಹೆಸರೇನು? ಅವನ ಮಗನ ಹೆಸರೇನು? ನೀನೇ ಬಲ್ಲವನು.
Kannada Bible (KNCL) BSI 2016
ಆಕಾಶಕ್ಕೆ ಏರಿ ಮರಳಿದವನು ಯಾರು? ಮುಷ್ಟಿಯಲ್ಲಿ ಗಾಳಿಯನ್ನು ಹಿಡಿದಿಟ್ಟವನು ಯಾರು? ಬಟ್ಟೆಯಲ್ಲಿ ನೀರನ್ನು ಮೂಟೆಕಟ್ಟಿದವನು ಯಾರು? ಭೂಮಿಗೆ ಎಲ್ಲೆಮೇರೆಗಳನ್ನು ನಿಗದಿಮಾಡಿದವನು ಯಾರು? ಆತನ ಹೆಸರೇನು? ಆತನ ಮಗನ ಹೆಸರೇನು? ಬಲ್ಲೆಯಾ?
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯಾರು ಸ್ವರ್ಗಕ್ಕೆ ಹೋಗಿ ಕೆಳಗಿಳಿದು ಬಂದಿದ್ದಾರೆ? ಯಾರ ಕೈಗಳು ಗಾಳಿಯನ್ನು ಒಟ್ಟುಗೂಡಿಸಿವೆ? ಯಾರು ತಮ್ಮ ವಸ್ತ್ರದಲ್ಲಿ ಸಾಗರಗಳನ್ನು ಮೂಟೆಕಟ್ಟಿಕೊಂಡಿದ್ದಾರೆ? ಭೂಮಿಯ ಎಲ್ಲೆಗಳನ್ನೆಲ್ಲಾ ಸ್ಥಾಪಿಸಿದವರು ಯಾರು? ಅವರ ಹೆಸರೇನು? ಅವರ ಮಗನ ಹೆಸರೇನು? ಖಂಡಿತವಾಗಿಯೂ ನಿಮಗೆ ಗೊತ್ತಿರಬೇಕು!