Psalms 102:27 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ದೇವರೇ, ನೀನಾದರೋ ಎಂದಿಗೂ ಬದಲಾಗುವುದಿಲ್ಲ. ನೀನು ಎಂದೆಂದಿಗೂ ಜೀವಿಸುವೆ!
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀನಾದರೋ ಏಕರೀತಿಯಾಗಿರುತ್ತಿ; ನಿನ್ನ ವರ್ಷಗಳು ಮುಗಿದುಹೋಗುವುದಿಲ್ಲ.
Kannada BSI Bible 2016
ಆದರೆ ನೀನು ಏಕ ರೀತಿಯಾಗಿರುತ್ತೀ; ನಿನ್ನ ವರುಷಗಳು ಮುಗಿಯವು.ನಿನ್ನ ಸೇವಕರ ಮಕ್ಕಳು ನೆಲೆಯಾಗಿದ್ದು ಅವರ ಸಂತತಿಯು ನಿನ್ನ ಮುಂದೆ ಸ್ಥಾಪಿಸಲ್ಪಡುವದು.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀನಾದರೋ ಏಕರೀತಿಯಾಗಿದ್ದೀ; ನಿನ್ನ ವರುಷಗಳು ಮುಗಿದುಹೋಗುವದಿಲ್ಲ.
Kannada Bible (KNCL) BSI 2016
ನೀನಂತೂ ಬದಲಾಗದೆ ಇರುವೆಯಯ್ಯಾ I ನಿನ್ನ ವರುಷಗಳಿಗೆ ಮುಗಿವೇ ಇಲ್ಲವಯ್ಯಾ II
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ನೀವು ಏಕರೀತಿಯಾಗಿದ್ದೀರಿ. ನಿಮ್ಮ ವರ್ಷಗಳು ಮುಗಿದುಹೋಗುವುದಿಲ್ಲ.