Psalms 105:44 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅನ್ಯಜನರು ವಾಸವಾಗಿದ್ದ ದೇಶವನ್ನು ದೇವರು ತನ್ನ ಜನರಿಗೆ ಕೊಟ್ಟನು. ಅನ್ಯಜನರು ದುಡಿದು ಸಂಪಾದಿಸಿದ್ದವುಗಳನ್ನು ದೇವಜನರು ಪಡೆದುಕೊಂಡರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆತನು ಅವರಿಗೆ ಪರಜನಾಂಗಗಳ ದೇಶವನ್ನು ಕೊಟ್ಟನು; ಅನ್ಯಜನಾಂಗಗಳ ಕಷ್ಟಾರ್ಜಿತವು ಅವರ ಕೈ ಸೇರಿತು.
Kannada BSI Bible 2016
ಅವರು ಪ್ರಜೆಗಳ ಕಷ್ಟಾರ್ಜಿತವನ್ನು ಸ್ವಾಧೀನಮಾಡಿಕೊಂಡರು.ಆತನ ನಿಯಮಗಳನ್ನು ಕೈಕೊಂಡು ನ್ಯಾಯಪ್ರಮಾಣ ಗಳನ್ನೂ ಕಾಪಾಡುವದಕ್ಕಾಗಿ ಆತನು ಅನ್ಯಜನಾಂಗದ ದೇಶಗಳನ್ನು ಅವರಿಗೆ ಕೊಟ್ಟನು. ಕರ್ತನನ್ನು ಸ್ತುತಿಸಿರಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ಮತ್ತು ಆತನು ಅವರಿಗೆ ಪರಜನರ ದೇಶಗಳನ್ನು ಕೊಟ್ಟನು; ಅನ್ಯಜನಾಂಗಗಳ ಕಷ್ಟಾರ್ಜಿತವು ಅವರಿಗೆ ಕೈ ಸೇರಿತು.
Kannada Bible (KNCL) BSI 2016
ಕೊಟ್ಟನವರಿಗೆ ಅನ್ಯರಾಷ್ಟ್ರಗಳ ನಾಡುಬೀಡನು I ಅವರ ಕೈವಶಮಾಡಿದನು ಅನ್ಯರ ಕಷ್ಟಾರ್ಜಿತವನು II
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ದೇವರು ಜನಾಂಗಗಳ ದೇಶಗಳನ್ನು ಅವರಿಗೆ ಕೊಟ್ಟರು. ಇಸ್ರಾಯೇಲರು ಇತರರ ಕಷ್ಟಾರ್ಜಿತವನ್ನು ತಮಗಾಗಿ ಸ್ವಾಧೀನಮಾಡಿಕೊಂಡರು.