Psalms 109:17 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಜನರನ್ನು ಶಪಿಸುವುದೇ ಅವನಿಗೆ ಇಷ್ಟವಾಗಿತ್ತು. ಆದ್ದರಿಂದ ಆ ಶಾಪಗಳು ಅವನಿಗೇ ಸಂಭವಿಸಲಿ. ಅವನು ಜನರನ್ನು ಆಶೀರ್ವದಿಸಲೇ ಇಲ್ಲ. ಆದ್ದರಿಂದ ಅವನಿಗೆ ಒಳ್ಳೆಯದಾಗದಂತೆ ಮಾಡು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಶಪಿಸುವುದು ಅವನಿಗೆ ಇಷ್ಟವಾಗಿತ್ತು, ಅದೇ ಅವನಿಗೆ ಬರಲಿ! ಆಶೀರ್ವದಿಸುವುದು ಅವನಿಗೆ ಇಷ್ಟವಿರಲ್ಲಿಲ್ಲ, ಅದು ಅವನಿಂದ ದೂರವಿರಲಿ!
Kannada BSI Bible 2016
ಅವನು ಶಾಪವನ್ನು ಪ್ರೀತಿ ಮಾಡಿದನು; ಅದು ಅವನಿಗೆ ಬರಲಿ. ಆಶೀರ್ವಾದಕ್ಕೆ ಮೆಚ್ಚಲಿಲ್ಲ; ಅದು ಅವನಿಗೆ ದೂರವಾಗಿರಲಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ಶಪಿಸುವದು ಇಷ್ಟವಾಗಿದ್ದದರಿಂದ ಅದು ಅವನಿಗೆ ಬಂತು; ಆಶೀರ್ವದಿಸುವದು ಇಷ್ಟವಲ್ಲದ್ದರಿಂದ ಅದು ಅವನಿಗೆ ದೂರವಾಯಿತು.
Kannada Bible (KNCL) BSI 2016
ಅವನಿಗೆ ಪ್ರಿಯ ಶಪಿಸುವುದೆಂದರೆ, ಎರಗಲಿದೀಗ ಅವನ ಮೇಲೇ I ಆಶೀರ್ವದಿಸುವುದು ಅವನಿಗಪ್ರಿಯ, ಇರಲಿ ಅವನಿಗದು ದೂರದಲೇ II
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನು ಶಾಪಕೊಡಲು ಇಷ್ಟಪಟ್ಟನು; ಅದೇ ಅವನಿಗೆ ಬರಲಿ; ಅವನು ಆಶೀರ್ವಾದವನ್ನು ಮೆಚ್ಚಲಿಲ್ಲ; ಅದು ಅವನಿಗೆ ದೂರವಾಗಿರಲಿ.