Psalms 122:4 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಇಸ್ರೇಲಿನ ಕುಲಗಳವರು ಅಂದರೆ ಯೆಹೋವನ ಕುಲಗಳವರು ಯೆಹೋವನ ಹೆಸರನ್ನು ಕೊಂಡಾಡಲು ಅಲ್ಲಿಗೆ ಹೋಗುವರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕುಲಗಳು ಅಂದರೆ ಯೆಹೋವನ ಕುಲದವರು, ಯೆಹೋವನ ನಾಮದ ಕೀರ್ತನೆಗೋಸ್ಕರ, ಇಲ್ಲಿಗೆ ಯಾತ್ರೆ ಮಾಡುತ್ತಿದ್ದರು. ಇದು ಇಸ್ರಾಯೇಲರಲ್ಲಿದ್ದ ಕಟ್ಟಳೆಯಷ್ಟೆ.
Kannada BSI Bible 2016
ಅಲ್ಲಿಗೆ ಗೋತ್ರಗಳು, ಕರ್ತನ ಗೋತ್ರಗಳು, ಇಸ್ರಾಯೇಲಿಗೆ ಸಾಕ್ಷಿಯಾಗಿ, ಕರ್ತನ ಹೆಸರನ್ನು ಕೊಂಡಾಡುವದಕ್ಕೆ ಹೋಗುತ್ತದೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಕುಲಗಳು ಅಂದರೆ ಯಾಹುವಿನ ಕುಲದವರು ಯೆಹೋವನ ನಾಮಕೀರ್ತನೆಗೋಸ್ಕರ ಇಲ್ಲಿಗೇ ಯಾತ್ರೆಮಾಡುತ್ತಿದ್ದರು. ಇದು ಇಸ್ರಾಯೇಲ್ಯರಲ್ಲಿದ್ದ ಕಟ್ಟಳೆಯಷ್ಟೆ.
Kannada Bible (KNCL) BSI 2016
ಕುಲಗಳು ಯಾತ್ರೆಯಾಗಿ ಬರುವುವು ಇಲ್ಲಿಗೆ I ಮಾಡುವರಿಲ್ಲಿಯೆ ಪ್ರಭುವಿನ ನಾಮ ಕೀರ್ತನೆ I ಪಾಲಿಪರಿಂತು ಇಸ್ರೇಲರಿಗೆ ವಿಧಿಸಿದಾಜ್ಞೆ II
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅಲ್ಲಿಗೆ ಗೋತ್ರಗಳು, ಯೆಹೋವ ದೇವರು ಇಸ್ರಾಯೇಲಿಗೆ ಕೊಟ್ಟ ಕಟ್ಟಳೆಗಳ ಪ್ರಕಾರ ಯೆಹೋವ ದೇವರ ಹೆಸರನ್ನು ಕೊಂಡಾಡುವುದಕ್ಕೆ ಗೋತ್ರಗಳು ಯಾತ್ರೆಯಾಗಿ ಬರುತ್ತಿದ್ದವು.