Psalms 127:1 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೆಹೋವನು ಮನೆಯನ್ನು ಕಟ್ಟದಿದ್ದರೆ, ಕಟ್ಟುವವರ ಸಮಯವೆಲ್ಲಾ ವ್ಯರ್ಥ. ಯೆಹೋವನು ಪಟ್ಟಣವನ್ನು ಕಾಯದಿದ್ದರೆ, ಕಾವಲುಗಾರರ ಸಮಯವೆಲ್ಲಾ ವ್ಯರ್ಥ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋವನು ಮನೆಯನ್ನು ಕಟ್ಟದಿದ್ದರೆ, ಅದನ್ನು ಕಟ್ಟುವವರು ಕಷ್ಟಪಡುವುದು ವ್ಯರ್ಥ; ಯೆಹೋವನು ಪಟ್ಟಣವನ್ನು ಕಾಯದಿದ್ದರೆ, ಕಾವಲುಗಾರರು ಅದನ್ನು ಕಾಯುವುದು ವ್ಯರ್ಥ.
Kannada BSI Bible 2016
ಕರ್ತನು ಮನೆಯನ್ನು ಕಟ್ಟದಿದ್ದರೆ, ಅದನ್ನು ಕಟ್ಟುವವರು ವ್ಯರ್ಥವಾಗಿ ಕಷ್ಟಪಡುತ್ತಾರೆ; ಕರ್ತನು ಪಟ್ಟಣವನ್ನು ಕಾಪಾಡದೆ ಇದ್ದರೆ ಅದನ್ನು ಕಾಪಾಡುವವನು ವ್ಯರ್ಥವಾಗಿ ಎಚ್ಚರ ವಾಗಿರುತ್ತಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋವನು ಮನೇ ಕಟ್ಟದಿದ್ದರೆ ಅದನ್ನು ಕಟ್ಟುವವರು ಕಷ್ಟಪಡುವದು ವ್ಯರ್ಥ; ಯೆಹೋವನು ಪಟ್ಟಣವನ್ನು ಕಾಯದಿದ್ದರೆ ಕಾವಲುಗಾರರು ಅದನ್ನು ಕಾಯುವದು ವ್ಯರ್ಥ.
Kannada Bible (KNCL) BSI 2016
(ಯಾತ್ರಾಗೀತೆ) ಪ್ರಭುವೇ ಮನೆಮಠವನು ಕಟ್ಟದ ಹೊರತು I ಅದನು ಕಟ್ಟುವವರ ಪ್ರಯಾಸ ವ್ಯರ್ಥ II ಪ್ರಭುವೇ ಪಟ್ಟಣವನು ಕಟ್ಟಿದ ಹೊರತು I ಕಾವಲುಗಾರನು ಅದನು ಕಾಯುವುದು ವ್ಯರ್ಥ II
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೋವ ದೇವರು ಮನೆಯನ್ನು ಕಟ್ಟದೆ ಇದ್ದರೆ, ಅದನ್ನು ಕಟ್ಟುವವರು ವ್ಯರ್ಥವಾಗಿ ಪ್ರಯಾಸಪಡುತ್ತಾರೆ; ಯೆಹೋವ ದೇವರು ಪಟ್ಟಣವನ್ನು ಕಾಯದೆ ಇದ್ದರೆ, ಅದನ್ನು ಕಾಯುವವರು ವ್ಯರ್ಥವಾಗಿ ಕಾಯುತ್ತಾರೆ.