Psalms 131:1 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೆಹೋವನೇ, ನನ್ನ ಹೃದಯದಲ್ಲಿ ಗರ್ವವಿಲ್ಲ. ನನ್ನ ಕಣ್ಣುಗಳಲ್ಲಿ ಸೊಕ್ಕಿಲ್ಲ. ಮಹಾಕಾರ್ಯಗಳನ್ನಾಗಲಿ ಅಸಾಧ್ಯ ಕಾರ್ಯಗಳನ್ನಾಗಲಿ ಮಾಡಲು ನಾನು ಪ್ರಯತ್ನಿಸುವುದಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋವನೇ, ನನ್ನ ಹೃದಯದಲ್ಲಿ ಗರ್ವವಿಲ್ಲ; ನನಗೆ ಸೊಕ್ಕಿನ ಕಣ್ಣುಗಳಿಲ್ಲ; ಅಸಾಧ್ಯ ಕಾರ್ಯಗಳಿಗೆ ಕೈಹಾಕುವುದಿಲ್ಲ.
Kannada BSI Bible 2016
ಕರ್ತನೇ, ನನ್ನ ಹೃದಯವು ಗರ್ವದ್ದಲ್ಲ; ನನ್ನ ಕಣ್ಣುಗಳು ಅಹಂಭಾವ ದವುಗಳೂ ಅಲ್ಲ; ದೊಡ್ಡ ವಿಷಯಗಳಲ್ಲಿಯೂ ನನಗೆ ನಿಲುಕಲಾರದವುಗಳಲ್ಲಿಯೂ ನಾನು ನಡೆದುಕೊಳ್ಳು ವದಿಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋವನೇ, ನನ್ನ ಎದೆಯಲ್ಲಿ ಹವ್ಮಿುಲ್ಲ; ನನಗೆ ಸೊಕ್ಕಿನ ಕಣ್ಣಿಲ್ಲ; ಅಸಾಧ್ಯಕಾರ್ಯಗಳಲ್ಲಿ ಕೈಹಾಕುವದಿಲ್ಲ.
Kannada Bible (KNCL) BSI 2016
(ಯಾತ್ರಾಗೀತೆ) ಹಮ್ಮಿಲ್ಲ ಪ್ರಭು, ನನ್ನೆದೆಯೊಳು I ನನಗಿಲ್ಲ ಸೊಕ್ಕಿನ ಕಣ್ಣುಗಳು II ಶಕ್ತಿಮೀರಿದ ಕಾರ್ಯಕೆ ನಾ ಕೈ ಹಾಕಿಲ್ಲ I ಅಸಾಧ್ಯವಾದುದನು ನಾ ಕೈಗೊಂಡಿಲ್ಲ II
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೋವ ದೇವರೇ, ನನ್ನ ಹೃದಯವು ಗರ್ವದ್ದಲ್ಲ, ನನಗೆ ಸೊಕ್ಕಿನ ಕಣ್ಣಿಲ್ಲ ದೊಡ್ಡ ವಿಷಯಗಳಲ್ಲಿಯೂ ನನಗೆ ನಿಲುಕಲಾರದವುಗಳಲ್ಲಿಯೂ ನಾನು ಕೈ ಹಾಕುವುದಿಲ್ಲ.