Psalms 133:2 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅದು ಯಾಜಕನ ತಲೆಯ ಮೇಲೆ ಹಾಕಲ್ಪಟ್ಟು ಆರೋನನ ಗಡ್ಡಕ್ಕೂ ಅಲ್ಲಿಂದ ಅವನ ಉಡುಪುಗಳ ಮೇಲೆಯೂ ಇಳಿದುಬರುವ ಪರಿಮಳ ತೈಲದಂತಿರುವುದು;
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದು ಆರೋನನ ತಲೆಯ ಮೇಲೆ ಹಾಕಲ್ಪಟ್ಟು, ಅವನ ಗಡ್ಡದ ಮೇಲೆಯೂ, ಅವನ ಅಂಗಿಗಳ ಕೊರಳ ಪಟ್ಟಿಯವರೆಗೂ ಹರಿದು ಬರುವ ಶ್ರೇಷ್ಠ ತೈಲದಂತೆಯೂ,
Kannada BSI Bible 2016
ಅದು ತಲೆಯ ಮೇಲಿದ್ದು ಗಡ್ಡದ ಮೇಲೆ ಅಂದರೆ ಆರೋನನ ಗಡ್ಡದ ಮೇಲೆ ಇಳಿದು ಅವನ ವಸ್ತ್ರಗಳ ಅಂಚಿನ ವರೆಗೂ ಇಳಿಯುವ ಶ್ರೇಷ್ಠ ತೈಲದ ಹಾಗೆಯೂಚೀಯೋನಿನ ಪರ್ವತಗಳ ಮೇಲೆ ಬೀಳುವ ಹೆರ್ಮೋನಿನ ಮಂಜಿನ ಹಾಗೆಯೂ ಅದೆ; ಅಲ್ಲಿ ಕರ್ತನು ಆಶೀರ್ವಾದವನ್ನೂ ಯುಗಯುಗಕ್ಕಿರುವ ಜೀವವನ್ನೂ ಆಜ್ಞಾಪಿಸಿದ್ದಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅದು ಆರೋನನ ತಲೆಯ ಮೇಲೆ ಹಾಕಲ್ಪಟ್ಟು ಅವನ ಗಡ್ಡದ ಮೇಲೆಯೂ ಅಲ್ಲಿಂದ ಅವನ ಅಂಗಿಗಳ ಕೊರಳಪಟ್ಟಿಯವರೆಗೂ ಹರಿದುಬರುವ ಶ್ರೇಷ್ಠತೈಲದಂತೆಯೂ
Kannada Bible (KNCL) BSI 2016
ಅದು ರಮ್ಯ, ಸುರಿದ ಸುಗಂಧತೈಲ ಗಡ್ಡಕೆ ಇಳಿವಂತೆ I ಆರೋನನ ಗಡ್ಡದಿಂದ ಅವನ ಕೊರಳಪಟ್ಟಿಗೆ ಇಳಿವಂತೆ II
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆ ಒಂದಾಗಿರುವಿಕೆಯು ತಲೆಯ ಮೇಲಿಂದ ಗಡ್ಡದ ಮೇಲೆ ಅಂದರೆ, ಆರೋನನ ಗಡ್ಡದ ಮೇಲೆ ಇಳಿದು, ಅವನ ವಸ್ತ್ರದ ಕೊರಳಪಟ್ಟಿಯವರೆಗೆ ಮೇಲೆ ಇಳಿಯುವ ಅಮೂಲ್ಯ ತೈಲದ ಹಾಗೆ ಇರುತ್ತದೆ.