Psalms 143:11 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯೆಹೋವನೇ, ನನ್ನನ್ನು ಉಜ್ಜೀವಿಸಮಾಡು. ಆಗ ಜನರು ನಿನ್ನ ಹೆಸರನ್ನು ಕೊಂಡಾಡುವರು. ನೀನು ನಿಜವಾಗಿಯೂ ಒಳ್ಳೆಯವನೆಂಬುದನ್ನು ನನಗೆ ತೋರಿಸಿಕೊಡು. ನನ್ನನ್ನು ಶತ್ರುಗಳಿಂದ ರಕ್ಷಿಸು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋವನೇ, ನಿನ್ನ ಹೆಸರಿನ ನಿಮಿತ್ತ ನನ್ನನ್ನು ಉಜ್ಜೀವಿಸಮಾಡು; ನಿನ್ನ ನೀತಿಗನುಸಾರವಾಗಿ ನನ್ನ ಪ್ರಾಣವನ್ನು ವಿಪತ್ತಿನಿಂದ ಬಿಡಿಸು.
Kannada BSI Bible 2016
ಓ ಕರ್ತನೇ, ನಿನ್ನ ಹೆಸ ರಿನ ನಿಮಿತ್ತ ನನ್ನನ್ನು ಬದುಕಿಸಿ ನಿನ್ನ ನೀತಿಗನುಸಾರ ವಾಗಿ ನನ್ನ ಪ್ರಾಣವನ್ನು ಇಕ್ಕಟ್ಟಿನೊಳಗಿಂದ ಹೊರಗೆ ಬರಮಾಡು.ನಿನ್ನ ಕರುಣೆಯಿಂದ ನನ್ನ ಶತ್ರು ಗಳನ್ನು ಸಂಹರಿಸಿ ನನ್ನ ಪ್ರಾಣವನ್ನು ಸಂಕಟ ಪಡಿಸುವವರನ್ನೆಲ್ಲಾ ನಾಶಮಾಡು; ನಾನು ನಿನ್ನ ಸೇವಕನಾಗಿದ್ದೇನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋವನೇ, ನಿನ್ನ ಹೆಸರಿನ ನಿವಿುತ್ತ ನನ್ನನ್ನು ಉಜ್ಜೀವಿಸಮಾಡು; ನಿನ್ನ ನೀತಿಗನುಸಾರವಾಗಿ ನನ್ನ ಪ್ರಾಣವನ್ನು ವಿಪತ್ತಿನಿಂದ ಬಿಡಿಸು.
Kannada Bible (KNCL) BSI 2016
ಜೀವಿಸಮಾಡೆನ್ನನು ಪ್ರಭು, ನಿನ್ನ ನಾಮದ ನಿಮಿತ್ತ I ನಿನ್ನ ನೀತಿಗನುಸಾರ ಬಿಡಿಸೆನ್ನ ಪ್ರಾಣವನು ಆಪತ್ತಿನಿಂದ II
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೋವ ದೇವರೇ, ನಿಮ್ಮ ಹೆಸರಿನ ನಿಮಿತ್ತ ನನ್ನನ್ನು ಜೀವಿಸಮಾಡಿರಿ, ನಿಮ್ಮ ನೀತಿಗನುಸಾರ ನನ್ನ ಪ್ರಾಣವನ್ನು ಇಕ್ಕಟ್ಟಿನೊಳಗಿಂದ ಬಿಡಿಸಿರಿ.