Psalms 143:12 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಿನ್ನ ಶಾಶ್ವತ ಪ್ರೀತಿಯನ್ನು ನನಗೆ ತೋರಿಸು. ನನ್ನನ್ನು ಕೊಲ್ಲಬೇಕೆಂದಿರುವ ಶತ್ರುಗಳನ್ನು ಸೋಲಿಸು. ನಾನು ನಿನ್ನ ಸೇವಕನಾಗಿರುವೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನನಗೆ ಕೃಪೆತೋರಿಸಿ ನನ್ನ ವೈರಿಗಳನ್ನು ಖಂಡಿಸಿಬಿಡು. ನನ್ನ ಪ್ರಾಣಕಂಟಕರನ್ನೆಲ್ಲಾ ಕಡಿದುಹಾಕು; ನಾನು ನಿನ್ನ ಸೇವಕನಲ್ಲವೇ.
Kannada BSI Bible 2016
ನಿನ್ನ ಕರುಣೆಯಿಂದ ನನ್ನ ಶತ್ರು ಗಳನ್ನು ಸಂಹರಿಸಿ ನನ್ನ ಪ್ರಾಣವನ್ನು ಸಂಕಟ ಪಡಿಸುವವರನ್ನೆಲ್ಲಾ ನಾಶಮಾಡು; ನಾನು ನಿನ್ನ ಸೇವಕನಾಗಿದ್ದೇನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ನನಗೆ ಕೃಪೆತೋರಿಸಿ ನನ್ನ ವೈರಿಗಳನ್ನು ಖಂಡಿಸಿಬಿಡು. ನನ್ನ ಪ್ರಾಣಕಂಟಕರನ್ನೆಲ್ಲಾ ಕಡಿದುಹಾಕು; ನಾನು ನಿನ್ನ ಸೇವಕನಲ್ಲವೇ.
Kannada Bible (KNCL) BSI 2016
ನಿನ್ನಚಲ ಪ್ರೀತಿಯಿಂದ ಧ್ವಂಸಮಾಡು ಶತ್ರುಗಳನು I ನಶಿಸಿಹಾಕು ಪ್ರಾಣವೈರಿಗಳನು, ನಾ ನಿನ್ನ ದಾಸನು II
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಿಮ್ಮ ಒಂಡಬಡಿಕೆಯ ಪ್ರೀತಿಯಿಂದ ನನ್ನ ಶತ್ರುಗಳನ್ನು ಸುಮ್ಮನಿರಿಸುವೆನು, ನನ್ನ ವೈರಿಗಳೆಲ್ಲರೂ ನಾಶವಾಗಲಿ, ನಾನು ನಿಮ್ಮ ಸೇವಕನಾಗಿದ್ದೇನೆ.