Psalms 144:14 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಮ್ಮ ಸೈನಿಕರು ಸುರಕ್ಷಿತವಾಗಿದ್ದಾರೆ. ಯಾವ ಶತ್ರುಗಳೂ ನುಗ್ಗಿಬರಲು ಪ್ರಯತ್ನಿಸುತ್ತಿಲ್ಲ. ನಾವು ಯುದ್ಧಕ್ಕೆ ಹೋಗುವುದೂ ಇಲ್ಲ; ನಮ್ಮ ಬೀದಿಗಳಲ್ಲಿ ಗೋಳಾಟವೂ ಇರುವುದಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಮ್ಮ ಪಶುಗಳು ಅಸಂಖ್ಯಾತವಾಗಲಿ, ವೈರಿಗಳು ಒಳಗೆ ನುಗ್ಗುವುದಾಗಲಿ, ನಮ್ಮವರನ್ನು ಸೆರೆ ಒಯ್ಯುವುದಾಗಲಿ ಇರುವುದಿಲ್ಲ, ಬೀದಿಗಳಲ್ಲಿ ಗೋಳಾಟವು ಕೇಳಿಸುವುದಿಲ್ಲ.
Kannada BSI Bible 2016
ನಮ್ಮ ಎತ್ತುಗಳು ಪ್ರಯಾಸಪಡುವದಕ್ಕೆ ಬಲವುಳ್ಳ ವುಗಳಾಗಲಿ; ಒಳಗೆ ನುಗ್ಗುವದಾಗಲಿ ಹೊರಗೆ ಹೋಗು ವದಾಗಲಿ ಆಗದಿರಲಿ; ನಮ್ಮ ಬೀದಿಗಳಲ್ಲಿ ದೂರು ವದು ಇಲ್ಲದಿರಲಿ.ಹೀಗಿರುವ ಜನರು ಧನ್ಯರು; ಕರ್ತನು ತಮಗೆ ದೇವರಾಗಿರುವ ಜನರು ಧನ್ಯರು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಮ್ಮ ಎತ್ತುಗಳು ದೊಡ್ಡ ಹೇರುಗಳನ್ನು ಹೊತ್ತು ಬರುವವು. ವೈರಿಗಳು ಒಳಗೆ ನುಗ್ಗುವದಾಗಲಿ ನಮ್ಮವರನ್ನು ಒಯ್ಯುವದಾಗಲಿ ಇರುವದಿಲ್ಲ; ಬೀದಿಗಳಲ್ಲಿ ಗೋಳಾಟವು ಕೇಳಿಸುವದಿಲ್ಲ.
Kannada Bible (KNCL) BSI 2016
ನಮ್ಮ ಹಸುಗಳು ನೂರಾರು ಕರುಗಳನ್ನೀಯಲಿ I ಮೈಯಿಳಿಯದೆ, ಲೋಪವಿಲ್ಲದೆಯೆ ಗರ್ಭಧರಿಸಲಿ I ನಮ್ಮ ಬೀದಿಗಳಲಿ ಗೋಳಾಟ ಕೇಳಿಬರದಿರಲಿ II
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಮ್ಮ ಎತ್ತುಗಳು ಪ್ರಯಾಸ ಪಡುವುದಕ್ಕೆ ಬಲವುಳ್ಳವುಗಳಾಗಲಿ; ವೈರಿಗಳು ಒಳಗೆ ನುಗ್ಗುವುದಾಗಲಿ, ನಮ್ಮವರನ್ನು ಸೆರೆ ಹಿಡಿಯುವುದಾಗಲಿ ಇರುವುದಿಲ್ಲ. ನಮ್ಮ ಬೀದಿಗಳಲ್ಲಿ ಗೋಳಾಟವು ಇಲ್ಲದಿರಲಿ.