Psalms 148:14 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆತನು ತನ್ನ ಜನರನ್ನು ಬಲಿಷ್ಠರನ್ನಾಗಿ ಮಾಡುತ್ತಾನೆ. ಆತನ ಭಕ್ತರನ್ನು ಜನರು ಹೊಗಳುವರು. ಜನರು ಇಸ್ರೇಲರನ್ನು ಹೊಗಳುವರು. ಆತನು ಹೋರಾಡುತ್ತಿರುವುದು ಅವರಿಗಾಗಿಯೇ. ಯೆಹೋವನಿಗೆ ಸ್ತೋತ್ರವಾಗಲಿ!
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆತನು ತನ್ನ ಪ್ರಜೆಗೋಸ್ಕರ ಘನದ ಕೊಂಬನ್ನು ಎಬ್ಬಿಸಿದ್ದಾನೆ. ಆದುದರಿಂದ ಆತನ ಎಲ್ಲಾ ಭಕ್ತರು, ಆತನ ಸಮೀಪ ಪ್ರಜೆಗಳಾದ ಇಸ್ರಾಯೇಲರು ಹಿಗ್ಗುತ್ತಾರೆ. ಯೆಹೋವನಿಗೆ ಸ್ತೋತ್ರ!
Kannada BSI Bible 2016
ಆತನು ತನ್ನ ಜನರ ಕೊಂಬನ್ನು ಮೇಲಕ್ಕೆತ್ತಿದ್ದಾನೆ; ಆತನ ಪರಿ ಶುದ್ಧರೆಲ್ಲರೂ ಇಸ್ರಾಯೇಲಿನ ಮಕ್ಕಳು, ಅಂದರೆ ಆತನಿಗೆ ಸವಿಾಪವಾದ ಜನರ ಸ್ತೋತ್ರವನ್ನು ಗೌರವಿ ಸುತ್ತಾನೆ; ಕರ್ತನನ್ನು ಸ್ತುತಿಸಿರಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆತನು ತನ್ನ ಪ್ರಜೆಗೋಸ್ಕರ [ಘನದ] ಕೊಂಬನ್ನು ಎಬ್ಬಿಸಿದ್ದಾನೆ. ಆದದರಿಂದ ಆತನ ಎಲ್ಲಾ ಭಕ್ತರೂ ಆತನ ಸಮೀಪ ಪ್ರಜೆಗಳಾದ ಇಸ್ರಾಯೇಲ್ಯರೂ ಹಿಗ್ಗುತ್ತಾರೆ. ಯಾಹುವಿಗೆ ಸ್ತೋತ್ರ!
Kannada Bible (KNCL) BSI 2016
ಕೋಡು ಮೂಡಿಸಿಹನು ಪ್ರಭು ತನ್ನ ಪ್ರಜೆಗೆ I ಖ್ಯಾತಿ ತಂದಿಹನು ತನ್ನ ಭಕ್ತಾದಿಗಳಿಗೆ I ತನ್ನ ಆಪ್ತಜನರಾದ ಇಸ್ರಯೇಲರಿಗೆ I ಅಲ್ಲೆಲೂಯ! II
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ದೇವರು ತಮ್ಮ ಜನರ ಬಲವನ್ನು ಮೇಲಕ್ಕೆತ್ತಿದ್ದಾರೆ. ದೇವರ ಇಸ್ರಾಯೇಲರೆಲ್ಲರೂ, ಭಕ್ತರೆಲ್ಲರೂ, ದೇವರಿಗೆ ಸಮೀಪವಾದ ಜನರೂ ದೇವರನ್ನು ಕೊಂಡಾಡಿರಿ. ಯೆಹೋವ ದೇವರನ್ನು ಸ್ತುತಿಸಿರಿ.