Psalms 16:3 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯೆಹೋವನು ಭೂಲೋಕದಲ್ಲಿರುವ ತನ್ನ ಭಕ್ತರಿಗೆ ಅತಿಶಯವಾದವುಗಳನ್ನು ಮಾಡುವನು; ಅವರ ಮೇಲೆ ತನಗಿರುವ ನಿಜವಾದ ಪ್ರೀತಿಯನ್ನು ತೋರ್ಪಡಿಸುವನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಭೂಲೋಕದಲ್ಲಿರುವ ದೇವಜನರ ವಿಷಯದಲ್ಲಿ, “ಇವರೇ ಶ್ರೇಷ್ಠರು, ಇವರೇ ನನಗೆ ಇಷ್ಟರಾದವರು” ಎಂದು ಹೇಳುವೆನು.
Kannada BSI Bible 2016
ಭೂಮಿಯಲ್ಲಿರುವ ಪರಿಶುದ್ಧರಿಗೂ ನನ್ನ ಸಂತೋಷ ವಾಗಿರುವ ಮುಖ್ಯಸ್ಥರಿಗೂ ಸೇರುತ್ತದೆಂದು ಓ ನನ್ನ ಆತ್ಮವೇ, ನೀನು ಕರ್ತನಿಗೆ ಹೇಳಿದ್ದೀ.
Kannada BSI JV (ಕನ್ನಡ ಸತ್ಯವೇದವು J.V. (BSI))
ಭೂಲೋಕದಲ್ಲಿರುವ ದೇವಜನರ ವಿಷಯದಲ್ಲಿ - ಇವರೇ ಶ್ರೆಷ್ಠರು, ಇವರೇ ನನಗೆ ಇಷ್ಟರಾದವರು ಎಂತಲೂ ಹೇಳುವೆನು.
Kannada Bible (KNCL) BSI 2016
ಸಂತರು ನಾಡಿಗೆ ತಿಲಕವು I ಅವರಲ್ಲಿದೆ ಎನಗೆ ಒಲವು II
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಭೂಲೋಕದಲ್ಲಿರುವ ದೇವಜನರ ಕುರಿತು, “ಇವರೇ ನನಗೆ ಶ್ರೇಷ್ಠರು. ಇವರಲ್ಲಿಯೇ ನನ್ನ ಎಲ್ಲಾ ಆನಂದವು,” ಎಂದು ಹೇಳುವೆನು.