Psalms 18:12 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಬಳಿಕ, ಆತನ ಉಜ್ವಲವಾದ ಪ್ರಕಾಶವು ಮೋಡಗಳನ್ನು ಛೇದಿಸಿಕೊಂಡು ನುಗ್ಗಲು ಆಲಿಕಲ್ಲಿನ ಮಳೆಯು ಸುರಿಯಿತು; ಮಿಂಚುಗಳು ಹೊಳೆದವು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆತನ ಸನ್ನಿಧಿಯ ಪ್ರಕಾಶದಿಂದ ಕಲ್ಮಳೆಯೂ, ಉರಿಗೆಂಡಗಳೂ ಹೊರಟು, ಆತನ ಸುತ್ತಲಿದ್ದ ಕಪ್ಪು ಮೋಡಗಳನ್ನು ದಾಟಿ ಸುರಿದವು.
Kannada BSI Bible 2016
ಆತನ ಮುಂದಿದ್ದ ಪ್ರಕಾಶದಿಂದ ಆತನ ಮಂದವಾದ ಮೋಡಗಳೂ ಕಲ್ಮಳೆಗಳೂ ಉರಿಗೆಂಡ ಗಳೂ ಹಾದು ಹೋದವು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆತನ ಸನ್ನಿಧಿಯ ಪ್ರಕಾಶದಿಂದ ಕಲ್ಮಳೆಯೂ ಉರಿಗೆಂಡಗಳೂ ಹೊರಟು ಆತನ ಸುತ್ತಲಿದ್ದ ಕರೀಮೋಡಗಳನ್ನು ದಾಟಿ ಸುರಿದವು.
Kannada Bible (KNCL) BSI 2016
ಹೊಳೆಯಿತು ಮಿಂಚು ಆತನ ತೇಜದ ಸನ್ನಿಧಿಯಿಂದ I ಸುರಿಯಿತು ಕಲ್ಮಳೆ, ಉರಿಗೆಂಡ ಕಾರ್ಮೋಡಗಳಿಂದ II
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರ ಸನ್ನಿಧಿಯ ಪ್ರಕಾಶದಿಂದ ಮೋಡಗಳು, ಕಲ್ಮಳೆ ಹಾಗೂ ಗುಡುಗು ಮಿಂಚುಗಳು ಹೊರಹೊಮ್ಮಿದವು.