Psalms 21:3 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನೀನು ರಾಜನನ್ನು ಬಹಳವಾಗಿ ಆಶೀರ್ವದಿಸಿರುವೆ. ಅವನ ತಲೆಗೆ ಬಂಗಾರದ ಕಿರೀಟವನ್ನು ತೊಡಿಸಿರುವೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾನಾ ಶುಭಗಳೊಡನೆ ನೀನೇ ಅವನನ್ನು ಎದುರುಗೊಂಡಿಯಲ್ಲಾ; ಅವನ ತಲೆಯ ಮೇಲೆ ಸುವರ್ಣ ಕಿರೀಟವನ್ನು ಇಟ್ಟಿದ್ದೀ.
Kannada BSI Bible 2016
ಒಳ್ಳೇತನದ ಆಶೀರ್ವಾದಗಳೊಂದಿಗೆ ಅವನನ್ನು ಎದುರುಗೊಂಡು ಅಪರಂಜಿಯ ಕಿರೀಟವನ್ನು ಅವನ ತಲೆಗೆ ಇಡುತ್ತೀ.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾನಾ ಶುಭಗಳೊಡನೆ ನೀನೇ ಅವನನ್ನು ಎದುರುಗೊಂಡಿಯಲ್ಲಾ; ಅವನ ತಲೆಯ ಮೇಲೆ ಸುವರ್ಣಕಿರೀಟವನ್ನು ಇಟ್ಟಿದ್ದೀ.
Kannada Bible (KNCL) BSI 2016
ನೀನಾತನನು ಸ್ವಾಗತಿಸಿದೆ ಶುಭಾಶಯದೊಂದಿಗೆ I ಚಿನ್ನದ ಕಿರೀಟವನು ಮುಡಿಸಿದೆ ಆತನ ಶಿರಸ್ಸಿಗೆ II
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೀವು ಉತ್ತಮ ಆಶೀರ್ವಾದಗಳಿಂದ ಅರಸನನ್ನು ಸ್ವಾಗತಿಸಿದ್ದೀರಿ; ಚೊಕ್ಕ ಬಂಗಾರದ ಕಿರೀಟವನ್ನು ಆತನ ತಲೆಯ ಮೇಲಿಟ್ಟಿದ್ದೀರಿ.