Psalms 27:13 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೆಹೋವನ ಒಳ್ಳೆಯತನವನ್ನು ನಾನು ಸಾಯುವುದಕ್ಕಿಂತ ಮುಂಚೆ ನೋಡುತ್ತೇನೆ ಎಂಬ ದೃಢನಂಬಿಕೆ ನನ್ನಲ್ಲಿದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಜೀವಲೋಕದಲ್ಲಿಯೇ ಯೆಹೋವನ ದಯೆಯನ್ನು ಅನುಭವಿಸುವೆನು ಎಂದು ದೃಢವಾಗಿ ನಂಬಿದ್ದೇನೆ.
Kannada BSI Bible 2016
ಜೀವಿತರ ದೇಶದಲ್ಲಿ ಕರ್ತನ ಒಳ್ಳೇತನ ವನ್ನು ನೋಡುವೆನೆಂದು ನಾನು ನಂಬದೆ ಹೋಗಿದ್ದರೆ ಮೂರ್ಛೆ ಹೋಗುತ್ತಿದ್ದೆನು.ಕರ್ತನಿಗಾಗಿ ಕಾದಿರು, ಧೈರ್ಯವಾಗಿರು; ಆತನು ನಿನ್ನ ಹೃದಯವನ್ನು ಬಲ ಪಡಿಸುವನು. ಕರ್ತನಿಗಾಗಿ ಕಾದಿರು ಎಂದು ನಾನು ಹೇಳುವೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಜೀವಲೋಕದಲ್ಲಿಯೇ ಯೆಹೋವನ ದಯೆಯನ್ನು ಅನುಭವಿಸುವೆನೆಂದು ದೃಢವಾಗಿ ನಂಬಿದ್ದೇನೆ.
Kannada Bible (KNCL) BSI 2016
ಪ್ರಭುವಿನೊಳಿತನು ನಾ ಕಾಣುವೆ ಜೀವಲೋಕದೊಳು I ನಾನಿಟ್ಟಿರುವೆ ನಂಬಿಕೆ ನಿರೀಕ್ಷೆ ಅದರೊಳು II
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದೊಂದು ನನ್ನ ಭರವಸೆಯಾಗಿರುವುದು: ನಾನಂತೂ ಯೆಹೋವ ದೇವರ ಒಳಿತನ್ನು ಜೀವಿತರ ದೇಶದಲ್ಲಿ ಕಾಣುವೆನು.