Psalms 27:8 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯೆಹೋವನೇ, ನಾನು ನಿನ್ನೊಂದಿಗೆ ಹೃದಯಪೂರ್ವಕವಾಗಿ ಮಾತನಾಡಬೇಕೆಂದಿದ್ದೇನೆ. ದೇವರೇ, ನಾನು ನಿನ್ನ ಸನ್ನಿಧಿಗೆ ಬರುತ್ತೇನೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ನನ್ನ ಸಾನ್ನಿಧ್ಯಕ್ಕೆ ಬಾ” ಎಂಬ ನಿನ್ನ ಮಾತಿಗೆ, ನಾನು, “ಯೆಹೋವನೇ, ನಿನ್ನ ಸಾನ್ನಿಧ್ಯಕ್ಕೆ ಬಂದೇ ಬರುವೆನು” ಎಂದು ಉತ್ತರಕೊಟ್ಟೆನು.
Kannada BSI Bible 2016
ನೀನು--ನನ್ನ ಮುಖವನ್ನು ನೀವು ಹುಡುಕಿರಿ ಎಂದು ಹೇಳಿದಿಯಲ್ಲಾ. ಕರ್ತನೇ, ನಿನ್ನ ಮುಖವನ್ನು ಹುಡು ಕುವೆನು ಎಂದು ನನ್ನ ಹೃದಯವು ನಿನಗೆ ಹೇಳಿತು.
Kannada BSI JV (ಕನ್ನಡ ಸತ್ಯವೇದವು J.V. (BSI))
ನನ್ನ ಸಾನ್ನಿಧ್ಯಕ್ಕೆ ಬಾ ಎಂಬ ನಿನ್ನ ಮಾತಿಗೆ ನಾನು - ಯೆಹೋವನೇ, ನಿನ್ನ ಸಾನ್ನಿಧ್ಯಕ್ಕೆ ಬರಲೇ ಬರುವೆನು ಎಂದು ಉತ್ತರ ಕೊಟ್ಟೆನು.
Kannada Bible (KNCL) BSI 2016
“ಅರಸೆನ್ನ ಮುಖದರುಶನವನು\, ಎಂದೆ ನೀನು I “ಅರಸುವೆನು ಅದನೆ\, ಎಂದು ಮರುನುಡಿದೆ ನಾನು II
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಿಮ್ಮ ಬಗ್ಗೆ ನನ್ನ ಹೃದಯವು ಹೀಗೆ ಹೇಳುತ್ತದೆ: “ದೇವರ ಮುಖವನ್ನು ಹುಡುಕು,” ಆದ್ದರಿಂದ ಯೆಹೋವ ದೇವರೇ, ನಿಮ್ಮ ಮುಖವನ್ನೇ ಹುಡುಕುತ್ತಿರುವೆನು.