Psalms 31:17 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೆಹೋವನೇ, ನಾನು ನಿನ್ನಲ್ಲಿ ಪ್ರಾರ್ಥಿಸಿದೆನು. ಆದ್ದರಿಂದ ನಾನು ನಿರಾಶನಾಗುವುದಿಲ್ಲ. ಕೆಡುಕರಾದರೋ ನಿರಾಶರಾಗುವರು. ಅವರು ಮೌನವಾಗಿ ಸಮಾಧಿಗೆ ಹೋಗುವರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋವನೇ, ಮೊರೆಯಿಟ್ಟಿದ್ದೇನೆ; ನನ್ನನ್ನು ನಿರಾಶೆಪಡಿಸಬೇಡ. ದುಷ್ಟರಿಗೇ ಆಶಾಭಂಗವಾಗಲಿ; ಅವರು ಸ್ತಬ್ಧರಾಗಿ ಪಾತಾಳಕ್ಕೆ ಬೀಳಲಿ.
Kannada BSI Bible 2016
ಓ ಕರ್ತನೇ, ನಿನಗೆ ಮೊರೆಯಿಟ್ಟಿದ್ದೇನೆ; ನಾನು ಆಶಾಭಂಗಪಡ ದಂತೆ ಮಾಡು; ದುಷ್ಟರು ಆಶಾಭಂಗಪಡಲಿ; ಅವರು ಸಮಾಧಿಯಲ್ಲಿ ಮೌನವಾಗಿರಲಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋವನೇ, ಮೊರೆಯಿಟ್ಟಿದ್ದೇನೆ; ನನಗೆ ಆಶಾಭಂಗಪಡಿಸಬೇಡ. ದುಷ್ಟರಿಗೇ ಆಶಾಭಂಗವಾಗಲಿ; ಅವರು ಸ್ತಬ್ಧರಾಗಿ ಪಾತಾಳಕ್ಕೆ ಬೀಳಲಿ.
Kannada Bible (KNCL) BSI 2016
ನಿನಗೆ ಮೊರೆಯಿಡುವೆ, ನನಗಾಗದಿರಲಿ ಹೇ ಪ್ರಭು, ಮಾನಭಂಗ I ದುರುಳರಿಗಾಗಲೀ ಆಶಾಭಂಗ, ಮೂಕರಾಗವರು ಸೇರಲಿ ನರಕ II
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೋವ ದೇವರೇ, ನಾನು ನಾಚಿಕೆಪಡದಂತೆ ಮಾಡಿರಿ; ನಾನು ನಿಮಗೆ ಮೊರೆಯಿಟ್ಟಿದ್ದೇನೆ; ದುಷ್ಟರು ನಾಚಿಕೆಪಡಲಿ; ಅವರು ಸಮಾಧಿ ಸೇರಲಿ.