Psalms 31:7 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ದೇವರೇ, ನಿನ್ನ ಕರುಣೆಯು ನನ್ನನ್ನು ಉಲ್ಲಾಸಗೊಳಿಸುವುದು. ನನ್ನ ಸಂಕಟವನ್ನು ನೀನು ನೋಡಿರುವೆ; ನನಗಿರುವ ಆಪತ್ತುಗಳು ನಿನಗೆ ತಿಳಿದಿವೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಿನ್ನ ಕೃಪೆಯಲ್ಲಿ ಸಂತೋಷಿಸಿ ಉಲ್ಲಾಸದಿಂದಿರುವೆನು; ನಾನು ಕುಗ್ಗಿಹೋಗಿರುವುದನ್ನು ನೋಡಿ, ನನ್ನ ಬಾಧೆಗಳನ್ನು ನೀನು ಲಕ್ಷ್ಯಕ್ಕೆ ತೆಗೆದುಕೊಂಡಿಯಲ್ಲಾ.
Kannada BSI Bible 2016
ನಿನ್ನ ಕರುಣೆ ಯಲ್ಲಿ ಉಲ್ಲಾಸಿಸಿ ಸಂತೋಷಪಡುವೆನು; ಯಾಕಂ ದರೆ ನೀನು ನನ್ನ ಕಷ್ಟವನ್ನು ಲಕ್ಷ್ಯಕ್ಕೆ ತಂದು ನನ್ನ ಪ್ರಾಣವು ಇಕ್ಕಟ್ಟುಗಳಲ್ಲಿರುವದನ್ನು ಅರಿತಿದ್ದೀಯಲ್ಲಾ.
Kannada BSI JV (ಕನ್ನಡ ಸತ್ಯವೇದವು J.V. (BSI))
ನಿನ್ನ ಕೃಪೆಯಲ್ಲಿ ಸಂತೋಷಿಸಿ ಉಲ್ಲಾಸದಿಂದಿರುವೆನು; ನಾನು ಕುಗ್ಗಿಹೋಗಿರುವದನ್ನು ನೋಡಿ ನನ್ನ ಬಾಧೆಗಳನ್ನು ನೀನು ಲಕ್ಷ್ಯಕ್ಕೆ ತೆಗೆದುಕೊಂಡಿಯಲ್ಲಾ.
Kannada Bible (KNCL) BSI 2016
ಹರ್ಷಾನಂದಗೊಳ್ಳುವೆ ನೆನೆದು ನಿನ್ನ ಅನಂತ ಪ್ರೀತಿಯನು I ಈಕ್ಷಿಸಿದೆ ನೀ ಭಕ್ತನ ದೀನತೆಯನು, ಲಕ್ಷಿಸಿದೆ ಬಾಧೆಗಳನು II
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಿಮ್ಮ ಒಡಂಬಡಿಕೆಯ ಪ್ರೀತಿಯಲ್ಲಿ ಉಲ್ಲಾಸಿಸಿ ಸಂತೋಷ ಪಡುವೆನು; ಏಕೆಂದರೆ ನೀವು ನನ್ನ ಕಷ್ಟಗಳನ್ನು ಲಕ್ಷ್ಯಕ್ಕೆ ತಂದು, ನನ್ನ ಪ್ರಾಣದ ಸಂಕಟಗಳನ್ನು ಅರಿತಿದ್ದೀರಿ.