Psalms 35:17 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನನ್ನ ಒಡೆಯನೇ, ಇವುಗಳನ್ನು ಇನ್ನೆಷ್ಟುಕಾಲ ನೋಡುತ್ತಾ ಇರುವೆ? ಅವರು ನನ್ನನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದಾರೆ. ನನ್ನ ಪ್ರಾಣವನ್ನು ರಕ್ಷಿಸು. ಸಿಂಹಗಳಂತಿರುವ ಆ ದುಷ್ಟರಿಂದ ನನ್ನ ಪ್ರಿಯ ಪ್ರಾಣವನ್ನು ರಕ್ಷಿಸು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕರ್ತನೇ, ಇನ್ನೆಷ್ಟರ ವರೆಗೆ ಸುಮ್ಮನೆ ನೋಡುತ್ತಾ ಇರುವಿ? ಅವರ ಅಪಾಯದಿಂದ ನನ್ನ ಪ್ರಾಣವನ್ನು ಬಿಡಿಸು; ನನ್ನ ಪರಮಪ್ರಿಯ ಪ್ರಾಣವನ್ನು ಆ ಸಿಂಹಗಳ ಬಾಯಿಗೆ ಸಿಕ್ಕದಂತೆ ತಪ್ಪಿಸು.
Kannada BSI Bible 2016
ಕರ್ತನೇ, ಎಷ್ಟರ ವರೆಗೆ ನೀನು ನೋಡುವಿ? ಅವರ ನಾಶನಗಳಿಂದಲೂ ಸಿಂಹಗಳಿಂದಲೂ ನನ್ನ ಪ್ರಿಯವಾದ ಪ್ರಾಣವನ್ನು ತಪ್ಪಿಸು.
Kannada BSI JV (ಕನ್ನಡ ಸತ್ಯವೇದವು J.V. (BSI))
ಕರ್ತನೇ, ಇನ್ನೆಷ್ಟರವರೆಗೆ ಸುಮ್ಮನೆ ನೋಡುತ್ತಾ ಇರುವಿ? ಅವರ ಅಪಾಯದಿಂದ ನನ್ನ ಪ್ರಾಣವನ್ನು ಬಿಡಿಸು; ನನ್ನ ಪರಮಪ್ರಿಯಪ್ರಾಣವನ್ನು ಆ ಸಿಂಹಗಳ ಬಾಯಿಗೆ ಸಿಕ್ಕದಂತೆ ತಪ್ಪಿಸು.
Kannada Bible (KNCL) BSI 2016
ಇನ್ನೆಷ್ಟರವರೆಗೆ ಪ್ರಭು, ನೀ ಸುಮ್ಮನಿರುವೆ ನೋಡುತ? I ಬಿಡಿಸೆನ್ನ ಹಾವಳಿಯಿಂದ, ಸಿಂಹಗಳ ಬಾಯಿಂದ II
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೋವ ದೇವರೇ, ಎಷ್ಟರವರೆಗೆ ನೀವು ಸುಮ್ಮನೆ ನೋಡುತ್ತಾ ಇರುವಿರಿ? ಅವರ ಅಪಾಯಗಳಿಂದ ನನ್ನ ಪ್ರಾಣವನ್ನು ಬಿಡಿಸಿರಿ. ಆ ಸಿಂಹಗಳಿಂದ ನನ್ನ ಅಮೂಲ್ಯ ಪ್ರಾಣವನ್ನೂ ತಪ್ಪಿಸಿರಿ.