Psalms 35:27 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನನಗೆ ನ್ಯಾಯ ದೊರೆಯಲೆಂದು ಅಪೇಕ್ಷಿಸುವವರು ಸಂತೋಷಪಡಲಿ. “ಯೆಹೋವನು ಎಷ್ಟೋ ದೊಡ್ಡವನು! ಆತನು ತನ್ನ ಸೇವಕನಿಗೆ ಅತ್ಯುತ್ತಮವಾದುದನ್ನೇ ಮಾಡಿದನು” ಎಂದು ಅವರು ಹೇಳುತ್ತಲೇ ಇರಲಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನನ್ನ ನ್ಯಾಯಸ್ಥಾಪನೆಯನ್ನು ಬಯಸುವವರು ಆನಂದದೊಡನೆ ಜಯಧ್ವನಿಮಾಡಲಿ; ತನ್ನ ಸೇವಕನ ಹಿತವನ್ನು ಕೋರುವ ಯೆಹೋವನಿಗೆ ಸ್ತೋತ್ರ ಎಂದು ಯಾವಾಗಲೂ ಹೇಳುವವರಾಗಲಿ.
Kannada BSI Bible 2016
ನನ್ನ ನೀತಿಯಲ್ಲಿ ಸಂತೋಷ ಪಡುವವರು ಉತ್ಸಾಹಧ್ವನಿಮಾಡಿ ಆನಂದಪಡಲಿ; ಹೌದು, ತನ್ನ ಸೇವಕನ ಅಭಿವೃದ್ಧಿಯಲ್ಲಿ ಸಂತೋ ಷಪಡುವ ಕರ್ತನು ಮಹಿಮೆಹೊಂದಲಿ ಎಂದು ಅವರು ಯಾವಾಗಲೂ ಹೇಳಲಿ.ಆಗ ನನ್ನ ನಾಲಿ ಗೆಯು ನಿನ್ನ ನೀತಿಯನ್ನೂ ಸ್ತೋತ್ರವನ್ನೂ ದಿನವೆಲ್ಲಾ ಉಚ್ಚರಿಸುವದು.
Kannada BSI JV (ಕನ್ನಡ ಸತ್ಯವೇದವು J.V. (BSI))
ನನ್ನ ನ್ಯಾಯಸ್ಥಾಪನೆಯನ್ನು ಬಯಸುವವರು ಆನಂದದೊಡನೆ ಜಯಧ್ವನಿ ಮಾಡಲಿ; ತನ್ನ ಸೇವಕನ ಹಿತವನ್ನು ಕೋರುವ ಯೆಹೋವನಿಗೆ ಸ್ತೋತ್ರ ಎಂದು ಯಾವಾಗಲೂ ಹೇಳುವವರಾಗಲಿ.
Kannada Bible (KNCL) BSI 2016
ನನಗೆ ನ್ಯಾಯ ಬಯಸುವವರು ನಲಿದು ಮಾಡಲಿ ಜಯಕಾರ I “ದಾಸನ ಹಿತೈಷಿ ಪ್ರಭುಗೆ, ಜೈ” ಎಂಬ ನಿರಂತರ ಪ್ರಚಾರ II
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನನ್ನ ನೀತಿಯಲ್ಲಿ ಸಂತೋಷಪಡುವವರು ಉತ್ಸಾಹಧ್ವನಿ ಮಾಡಿ, ಆನಂದಪಡಲಿ; “ಹೌದು, ತಮ್ಮ ಸೇವಕನ ಅಭಿವೃದ್ಧಿಯಲ್ಲಿ ಸಂತೋಷಪಡುವ ಯೆಹೋವ ದೇವರು ಮಹಿಮೆಪಡಲಿ,” ಎಂದು ಅವರು ಯಾವಾಗಲೂ ಹೇಳಲಿ.