Psalms 37:20 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ದುಷ್ಟರಾದರೋ ಯೆಹೋವನ ವೈರಿಗಳಾಗಿದ್ದಾರೆ. ಅವರು ನಾಶವಾಗುವರು. ಅವರ ಕಣಿವೆಗಳು ಒಳಗೆ ಸುಟ್ಟುಹೋಗುತ್ತವೆ; ಅವರು ಹೊಗೆಯಂತೆ ಇಲ್ಲವಾಗುವರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ದುಷ್ಟರೋ ನಾಶವಾಗಿ ಹೋಗುವರು; ಯೆಹೋವನ ವೈರಿಗಳು ಹುಲ್ಲುಗಾವಲುಗಳ ಸೊಗಸಿನಂತಿದ್ದು ಮಾಯವಾಗುವರು. ಅವರು ಹಬೆಯಂತೆ ತೋರಿ ಅಡಗಿಹೋಗುವರು.
Kannada BSI Bible 2016
ದುಷ್ಟರು ನಾಶವಾಗುವರು; ಕರ್ತನ ಶತ್ರುಗಳು ಕುರಿಮರಿಗಳ ಕೊಬ್ಬಿನ ಹಾಗೆ ಇದ್ದು ಕರಗಿಹೋಗು ವರು; ಹೊಗೆಯಲ್ಲಿ ಕರಗಿಹೋಗುವರು.
Kannada BSI JV (ಕನ್ನಡ ಸತ್ಯವೇದವು J.V. (BSI))
ದುಷ್ಟರೋ ನಾಶವಾಗಿ ಹೋಗುವರು; ಯೆಹೋವನ ವೈರಿಗಳು ಹುಲ್ಲುಗಾವಲುಗಳ ಸೊಗಸಿನಂತಿದ್ದು ಮಾಯವಾಗುವರು. ಅವರು ಹಬೆಯಂತೆ ತೋರಿ ಅಡಗಿಹೋಗುವರು.
Kannada Bible (KNCL) BSI 2016
ದುರುಳರ ಬೆಡಗೋ ಬಾಡಿಹೋಗುವುದು ಹುಲ್ಲಿನಂತೆ I ಪ್ರಭುವಿನ ಶತ್ರುಗಳು ತೇಲಿಹೋಗುವರು ಹೊಗೆಯಂತೆ II
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ದುಷ್ಟರು ನಾಶವಾಗುವರು; ಯೆಹೋವ ದೇವರ ಶತ್ರುಗಳು ಗದ್ದೆಯ ಹೂಗಳಂತೆ ಬಾಡಿಹೋಗುವರು; ಹೊಗೆಯಂತೆ ಮಾಯವಾಗುವರು.