Psalms 43:1 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ದೇವರೇ, ನನ್ನನ್ನು ನಿರಪರಾಧಿಯೆಂದು ತೀರ್ಪು ನೀಡು. ವ್ಯಾಜ್ಯದಲ್ಲಿ ನನ್ನ ಪರವಾಗಿಯೂ ಅನ್ಯ ಜನಾಂಗಗಳಿಗೆ ವಿರೋಧವಾಗಿಯೂ ವಾದಿಸು. ಸುಳ್ಳುಗಾರರಿಂದಲೂ ಕೆಡುಕರಿಂದಲೂ ನನ್ನನ್ನು ರಕ್ಷಿಸು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ದೇವರೇ, ನ್ಯಾಯವನ್ನು ತೀರಿಸು; ನನಗೋಸ್ಕರ ವ್ಯಾಜ್ಯವನ್ನು ನಡೆಸಿ ಭಕ್ತಿ ಇಲ್ಲದ ಜನಾಂಗದಿಂದ ತಪ್ಪಿಸು, ದುರಾಚಾರಿಗಳಾದ ಮೋಸಗಾರರಿಂದ ನನ್ನನ್ನು ಬಿಡಿಸು.
Kannada BSI Bible 2016
ಓ ದೇವರೇ, ನನಗೆ ನ್ಯಾಯತೀರಿಸು. ಭಕ್ತಿ ಇಲ್ಲದ ಜನಾಂಗದ ಸಂಗಡ ನನ್ನ ನ್ಯಾಯವನ್ನು ವಾದಿಸು; ಮೋಸವೂ ಅನ್ಯಾಯವೂ ಉಳ್ಳ ಮನುಷ್ಯನಿಂದ ನನ್ನನ್ನು ತಪ್ಪಿಸು.
Kannada BSI JV (ಕನ್ನಡ ಸತ್ಯವೇದವು J.V. (BSI))
ದೇವರೇ, ನ್ಯಾಯವನ್ನು ನಿರ್ಣಯಿಸು; ನನಗೋಸ್ಕರ ವ್ಯಾಜ್ಯವನ್ನು ನಡಿಸಿ ನಿರ್ದಯವಾದ ಜನಾಂಗದಿಂದ ತಪ್ಪಿಸು, ದುರಾಚಾರಿಗಳಾದ ಮೋಸಗಾರರಿಂದ ನನ್ನನ್ನು ಬಿಡಿಸು.
Kannada Bible (KNCL) BSI 2016
(42ನೇ ಕೀರ್ತನೆ ಮುಂದುವರಿದುದು) ನಿರ್ಣಯಿಸು ನನ್ನ ನ್ಯಾಯವನು ಓ ದೇವಾ I ವಾದಿಸು ಆ ಭಕ್ತಿಹೀನ ಜನತೆಯ ವಿರುದ್ಧ I ಬಿಡಿಸೆನ್ನನು ವಂಚಕರಿಂದ, ಅಧರ್ಮಿಗಳಿಂದ II
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ದೇವರೇ, ನನ್ನನ್ನು ನಿರ್ದೋಷಿ ಎಂದು ನಿರ್ಣಯಿಸಿರಿ, ಭಕ್ತಿಹೀನ ಜನತೆಯ ವಿರೋಧವಾಗಿ ನನ್ನ ನ್ಯಾಯವನ್ನು ವಾದಿಸಿರಿ. ಮೋಸವೂ ಅನ್ಯಾಯವೂ ಉಳ್ಳ ಮನುಷ್ಯನಿಂದ ನನ್ನನ್ನು ತಪ್ಪಿಸಿರಿ.