Psalms 44:19 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆದರೆ ನರಿಗಳು ವಾಸಿಸುವ ಈ ಸ್ಥಳದಲ್ಲಿ ನೀನು ನಮ್ಮನ್ನು ಜಜ್ಜಿಹಾಕಿರುವೆ. ಮರಣದಂತೆ ಕತ್ತಲಾಗಿರುವ ಈ ಸ್ಥಳದಲ್ಲಿ ನೀನು ನಮ್ಮನ್ನು ತೊರೆದುಬಿಟ್ಟಿರುವೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆದರೂ ನೀನು ನಮ್ಮನ್ನು ಅಪಜಯಪಡಿಸಿ ನರಿಗಳಿರುವ ಕಾಡನ್ನಾಗಿ ಮಾಡಿದ್ದೇಕೆ? ಮರಣದ ನೆರಳು ನಮ್ಮನ್ನು ಕವಿಯುವಂತೆ ಮಾಡಿದ್ದೇಕೆ?
Kannada BSI Bible 2016
ಆದಾ ಗ್ಯೂ ಮಹಾಘಟಸರ್ಪಗಳ ಸ್ಥಳದಲ್ಲಿ ನಮ್ಮನ್ನು ಜಜ್ಜಿ ಮರಣದ ನೆರಳಿನಿಂದ ನಮ್ಮನ್ನು ಮುಚ್ಚಿಬಿಟ್ಟಿದ್ದೀ.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀನು ನಮ್ಮನ್ನು ಪರಾಜಯಪಡಿಸಿ ನಮ್ಮ ದೇಶವನ್ನು ನರಿಗಳಿರುವ ಕಾಡನ್ನಾಗಿ ಮಾಡಿದ್ದೇಕೆ? ಕಾರ್ಗತ್ತಲು ನಮ್ಮನ್ನು ಕವಿಯುವಂತೆ ಮಾಡಿದ್ದೇಕೆ?
Kannada Bible (KNCL) BSI 2016
ಆದರೂ ನಮ್ಮನ್ನು ತಂದು ನಾಯಿನರಿಗಳ ಪಾಲಾಗಿಸಿರುವೆ I ಕಾರ್ಗತ್ತಲೆಮ್ಮನು ಸುತ್ತುವರಿಯುವಂತೆ ಮಾಡಿರುವೆ II
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೂ ನರಿಗಳ ವಾಸಸ್ಥಳದಂತೆ ನಮ್ಮ ದೇಶವಿದೆ. ಕಾರ್ಗತ್ತಲಿನ ನೆರಳು ನಮ್ಮನ್ನು ಮುಚ್ಚಿಬಿಟ್ಟಂತಿದೆ.