Psalms 44:9 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆದರೆ, ದೇವರೇ, ಈಗ ನೀನು ನಮ್ಮನ್ನು ಕೈಬಿಟ್ಟಿರುವೆ. ನಮ್ಮನ್ನು ಅವಮಾನಕ್ಕೆ ಗುರಿಮಾಡಿರುವೆ. ನೀನು ನಮ್ಮೊಂದಿಗೆ ಯುದ್ಧಕ್ಕೆ ಬರಲಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆದರೆ ಈಗ ನೀನು ನಮ್ಮನು ಕೈಬಿಟ್ಟಿದ್ದೀ, ಅವಮಾನಪಡಿಸಿದಿ; ನಮ್ಮ ಸೈನ್ಯಗಳ ಸಂಗಡ ನೀನು ಹೋಗಲಿಲ್ಲ.
Kannada BSI Bible 2016
ಆದರೆ ನೀನು ನಮ್ಮನ್ನು ತಳ್ಳಿಬಿಟ್ಟು ನಮ್ಮನ್ನು ಅವಮಾನಪಡಿಸುತ್ತೀ; ನಮ್ಮ ಸೈನ್ಯಗಳ ಸಂಗಡ ನೀನು ಹೊರಟುಹೋಗುವದಿಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆದರೆ ಈಗ ನೀನು ಕೈಬಿಟ್ಟದ್ದರಿಂದ ಅವಮಾನಕ್ಕೆ ಒಳಗಾದೆವಲ್ಲಾ; ನಮ್ಮ ಸೈನ್ಯಗಳ ಸಂಗಡ ನೀನು ಹೊರಡಲಿಲ್ಲ.
Kannada Bible (KNCL) BSI 2016
ಆದರೀಗ ನಮ್ಮನು ಕಡೆಗಣಿಸಿರುವೆ, ಕೈ ಬಿಟ್ಟಿರುವೆ I ನಮ್ಮ ಸೇನೆಗಳ ಸಂಗಡ ದೇವ, ಹೊರಟು ಬರದಿರುವೆ II
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಈಗ ನೀವು ನಮ್ಮನ್ನು ತಳ್ಳಿಬಿಟ್ಟದ್ದರಿಂದ ನಾವು ಕುಗ್ಗಿಹೋಗಿದ್ದೇವೆ. ನಮ್ಮ ಸೈನ್ಯಗಳ ಸಂಗಡ ನೀವು ಹೊರಡಲಿಲ್ಲ.