Psalms 45:1 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಒಂದು ದಿವ್ಯ ವಿಷಯವನ್ನು ಹೇಳಲು ನನ್ನ ಹೃದಯವು ತವಕಪಡುತ್ತದೆ; ನನ್ನ ರಾಜನನ್ನು ಕುರಿತು ಸುಂದರವಾದ ಗೀತೆಯೊಂದನ್ನು ರಚಿಸುವೆ. ನನ್ನ ನಾಲಿಗೆಯು ಕವಿಯ ಲೇಖನಿಯಂತೆ ಸಿದ್ಧವಾಗಿದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಒಂದು ದಿವ್ಯ ವಿಷಯವನ್ನು ಹೇಳುವುದಕ್ಕೆ ನನ್ನ ಹೃದಯವು ತವಕಪಡುತ್ತದೆ; ನಾನು ರಾಜನನ್ನು ಕುರಿತು ಈ ಪದ್ಯವನ್ನು ರಚಿಸುವೆನು. ನನ್ನ ನಾಲಿಗೆಯು ಒಳ್ಳೆಯ ಬರಹಗಾರನ ಲೇಖನಿಯಂತೆ ಸಿದ್ಧವಾಗಿದೆ.
Kannada BSI Bible 2016
ನನ್ನ ಹೃದಯವು ಒಂದು ದಿವ್ಯ ವಿಷಯವನ್ನು ರಚಿಸುತ್ತಿರುವದು; ಅರಸನನ್ನು ಕುರಿತು ನಾನು ಮಾಡಿದವುಗಳನ್ನು ವಿವರಿಸುತ್ತೇನೆ; ನನ್ನ ನಾಲಿಗೆಯು ಬರೆಯುವವನ ಲೇಖನಿಯಂತೆ ಸಿದ್ಧವಾಗಿದೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಒಂದು ದಿವ್ಯ ವಿಷಯವನ್ನು ಹೇಳುವದಕ್ಕೆ ನನ್ನ ಹೃದಯವು ತವಕಪಡುತ್ತದೆ; ನಾನು ರಾಜನನ್ನು ಕುರಿತು ಈ ಪದ್ಯವನ್ನು ರಚಿಸುವೆನು. ನನ್ನ ನಾಲಿಗೆಯು ಒಳ್ಳೇ ಬರವಣಿಗಸ್ತನ ಲೇಖನಿಯಂತೆ ಸಿದ್ಧವಾಗಿದೆ.
Kannada Bible (KNCL) BSI 2016
ಉಜ್ವಲಾಲೋಚನೆಯೊಂದು ತುಡುಕುತಿದೆ ಮನದಲಿ I ರಚಿಸಲಿರುವೆ ಮಹಾರಾಜನಿಗೊಂದು ಗೀತಾಂಜಲಿ I ನನ್ನ ಜಿಹ್ವೆ, ಸಜ್ಜಾದ ಬರಹಗಾರನ ಲೇಖನಿ II
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನನ್ನ ಹೃದಯವು ಸೊಗಸಾದ ವಿಷಯದಿಂದ ಮಿಡಿಯುತ್ತಿದೆ. ಮಹಾರಾಜನನ್ನು ಕುರಿತು ನಾನು ರಚಿಸುವೆನು ಗೀತಾಂಜಲಿ. ನನ್ನ ನಾಲಿಗೆಯು ನಿಪುಣ ಬರಹಗಾರನ ಲೇಖನಿಯಂತೆ ಸಿದ್ಧವಾಗಿದೆ.