Psalms 45:14 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆಕೆಯು ಕಸೂತಿ ರಚಿತವಾದ ವಸ್ತ್ರಗಳನ್ನು ಧರಿಸಿಕೊಂಡು ತನ್ನ ಸಖಿಯರಾದ ಕನ್ಯಾಪರಿವಾರದೊಡನೆ ರಾಜನ ಬಳಿಗೆ ಬರುವಳು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಕೆಯು ಬೂಟೇದಾರಿ ವಸ್ತ್ರಗಳನ್ನು ಧರಿಸಿಕೊಂಡು, ಅವಳ ಸೇವೆಗಾಗಿ ಕನ್ಯೆಯರಾದ ಸಖೀಯರು ಅವಳನ್ನು ಹಿಂಬಾಲಿಸಿ, ಅರಸನ ಬಳಿಗೆ ಬರುವರು.
Kannada BSI Bible 2016
ಇವಳು ಕಸೂತಿ ವಸ್ತ್ರಗಳನ್ನುಟ್ಟು ಅರಸನ ಬಳಿಗೆ ತರಲ್ಪಡುತ್ತಾಳೆ; ಅವಳ ಹಿಂದೆ ಇರುವ ಕನ್ಯೆಯರಾದ ಅವಳ ಸಂಗಡಿಗರು ನಿನ್ನ ಬಳಿಗೆ ತರಲ್ಪಡುತ್ತಾರೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಕೆಯು ಬೂಟೇದಾರೀ ಕಸೂತಿಕೆಲಸದ ವಸ್ತ್ರಗಳನ್ನು ಧರಿಸಿಕೊಂಡು ಸಖಿಯರಾದ ಕನ್ಯೆಯರ ಪರಿವಾರದೊಡನೆ ಅರಸನ ಬಳಿಗೆ ಬರುವಳು.
Kannada Bible (KNCL) BSI 2016
ಭೂಷಿತಳಾಗಿಹಳಾಕೆ ಕಸೂತಿಕೆಲಸದ ವಸ್ತ್ರಗಳಿಂದ I ಬರುತಿಹಳು ರಾಜನ ಬಳಿಗೆ ಸಖಿಯರ ಪರಿವಾರ ಸಮೇತ II
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಕಸೂತಿ ಉಡುಪುಗಳಲ್ಲಿ ಮಹಾರಾಜರ ಬಳಿಗೆ ಆಕೆಯು ಹೊರಡುತ್ತಾಳೆ, ಅವಳ ಸಂಗಡ ಸಖಿಯರಾದ ಕನ್ಯೆಯರು ಸಹ ಹೊರಡುವರು.