Psalms 46:10 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ದೇವರು ಹೀಗೆನ್ನುವನು: “ಹೋರಾಡುವುದನ್ನು ನಿಲ್ಲಿಸಿ, ನಾನೇ ದೇವರೆಂಬುದನ್ನು ಕಲಿತುಕೊಳ್ಳಿ! ನಾನು ಜನಾಂಗಗಳನ್ನು ಸೋಲಿಸುವೆನು! ಇಡೀ ಲೋಕವನ್ನು ಹತೋಟಿಗೆ ತೆಗೆದುಕೊಳ್ಳುವೆನು!”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ ಕಾದಾಡುವುದನ್ನು ನಿಲ್ಲಿಸಿರಿ, ನಾನೇ ದೇವರು; ಲೋಕದ ಸಮಸ್ತ ಜನಗಳಿಗೂ ಸರ್ವಾಧಿಪತಿಯು ನಾನೇ ಎಂದು ತಿಳಿಯಿರಿ” ಎಂದು ಹೇಳಿದ್ದಾನೆ.
Kannada BSI Bible 2016
ಶಾಂತ ವಾಗಿರ್ರಿ, ನಾನೇ ದೇವರಾಗಿದ್ದೇನೆಂದು ತಿಳುಕೊಳ್ಳಿರಿ; ಜನಾಂಗಗಳಲ್ಲಿ ಉನ್ನತನಾಗಿರುವೆನು; ಭೂಮಿಯಲ್ಲಿ ನಾನು ಹೆಚ್ಚಿಸಲ್ಪಡುವೆನು.ಸೈನ್ಯಗಳ ಕರ್ತನು ನಮ್ಮ ಸಂಗಡ ಇದ್ದಾನೆ; ಯಾಕೋಬನ ದೇವರು ನಮಗೆ ಆಶ್ರಯವಾಗಿದ್ದಾನೆ. ಸೆಲಾ.
Kannada BSI JV (ಕನ್ನಡ ಸತ್ಯವೇದವು J.V. (BSI))
ಬಿಡಿರಿ, ನಾನೇ ದೇವರು; ಲೋಕದ ಸಮಸ್ತ ಜನಗಳಿಗೂ ಸರ್ವಾಧಿಪತಿಯು ನಾನೇ ಎಂದು ತಿಳಿದುಕೊಳ್ಳಿರಿ.
Kannada Bible (KNCL) BSI 2016
‘ಶಾಂತರಾಗಿರಿ, ತಿಳಿಯಿರಿ ನಾನು ದೇವನೆಂದು I ಜನಕ್ಕೂ ಜನಾಂಗಕ್ಕೂ ನಾನಧಿಪತಿಯೆಂದು’ II
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಶಾಂತವಾಗಿರಿ, ನಾನೇ ದೇವರಾಗಿದ್ದೇನೆಂದು ತಿಳಿದುಕೊಳ್ಳಿರಿ; ಜನಾಂಗಗಳಲ್ಲಿ ಉನ್ನತನಾಗಿರುವೆನು; ಭೂಮಿಯಲ್ಲಿ ಉನ್ನತನಾಗಿರುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.