Psalms 5:11 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ದೇವರಲ್ಲಿ ಭರವಸವಿಟ್ಟಿರುವ ಜನರೆಲ್ಲರೂ ಸದಾಕಾಲ ಸಂತೋಷವಾಗಿರಲಿ. ನಿನ್ನ ಹೆಸರನ್ನು ಪ್ರೀತಿಸುವ ಜನರನ್ನು ಕಾಪಾಡಿ ಅವರಿಗೆ ಶಕ್ತಿಯನ್ನು ದಯಪಾಲಿಸು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಿನ್ನನ್ನು ಮೊರೆಹೊಕ್ಕವರೆಲ್ಲರು ನಿನ್ನಲ್ಲಿ ಸಂತೋಷಪಡುವರು; ನೀನು ಕಾಪಾಡುವವನೆಂದು ಅವರು ಯಾವಾಗಲೂ ಆನಂದ ಧ್ವನಿಮಾಡುವರು. ನಿನ್ನ ನಾಮವನ್ನು ಪ್ರೀತಿಸುವವರು ನಿನ್ನಲ್ಲಿ ಉಲ್ಲಾಸಗೊಳ್ಳುವರು.
Kannada BSI Bible 2016
ಆದರೆ ನಿನ್ನಲ್ಲಿ ಭರವಸವಿಟ್ಟವರೆಲ್ಲರು ಸಂತೋಷಿ ಸಲಿ, ನೀನು ಅವರನ್ನು ಕಾಯುವದರಿಂದ ಯುಗ ಯುಗಕ್ಕೂ ಹರ್ಷಿಸಲಿ; ನಿನ್ನ ನಾಮವನ್ನು ಪ್ರೀತಿ ಮಾಡುವವರು ನಿನ್ನಲ್ಲಿ ಉತ್ಸಾಹಪಡಲಿ.ಕರ್ತನೇ, ನೀನು ನೀತಿವಂತನನ್ನು ಆಶೀರ್ವದಿಸುತ್ತೀ. ಖೇಡ್ಯದ ಹಾಗೆ ಅನುಗ್ರಹದಿಂದ ಅವನನ್ನು ಸುತ್ತಿಕೊಳ್ಳುತ್ತೀ.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋವನೇ, ನೀತಿವಂತನನ್ನು ಆಶೀರ್ವದಿಸುವವನು ನೀನೇ; ನಿನ್ನ ದಯವು ದೊಡ್ಡ ಗುರಾಣಿಯಂತೆ ಅವನನ್ನು ಆವರಿಸಿಕೊಳ್ಳುವದು.
Kannada Bible (KNCL) BSI 2016
ದೊರಕುವುದು ದೇವಾ, ನಿನ್ನಾಶೀರ್ವಾದ ಸಜ್ಜನರಿಗೆ I ಕವಚವಾದಂತಿಹುದು ನಿನ್ನ ಕರುಣೆ ಅಂಥವರಿಗೆ II ಎಂದೇ ಹರ್ಷಾನಂದಗೊಳ್ವರು ನಿನ್ನನಾಶ್ರಯಿಸಿದವರೆಲ್ಲರು I ನೀ ರಕ್ಷಿಸೆ, ಉಲ್ಲಾಸಗೊಳ್ಳುವರು ನಿನ್ನ ನಾಮಪ್ರಿಯರೆಲ್ಲರು II
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ನಿಮ್ಮನ್ನು ಆಶ್ರಯಿಸುವವರೆಲ್ಲರು ಆನಂದಿಸಲಿ; ಅವರು ಸದಾ ನಿಮ್ಮ ಆನಂದ ಗಾನವನ್ನು ಹಾಡಲಿ. ನಿಮ್ಮ ಹೆಸರನ್ನು ಪ್ರೀತಿಸುವವರು ನಿಮ್ಮಲ್ಲಿ ಆನಂದಿಸುವಂತೆ ಅವರನ್ನು ನಿಮ್ಮ ಸಂರಕ್ಷಣೆಯಿಂದ ಆವರಿಸಿಕೊಳ್ಳಿರಿ.