Psalms 59:10 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ದೇವರು ನನ್ನನ್ನು ಪ್ರೀತಿಸುವನು; ನನ್ನ ಜಯಕ್ಕೆ ಆತನೇ ಸಹಾಯ ಮಾಡುವನು. ನನ್ನ ಶತ್ರುಗಳನ್ನು ಸೋಲಿಸಲು ಆತನೇ ನನಗೆ ನೆರವು ನೀಡುವನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನನ್ನ ದೇವರು ತನ್ನ ಮಹಾ ಪ್ರೀತಿಯಿಂದ ನನಗೆ ಸಹಾಯಮಾಡುವನು; ನನ್ನ ವಿರೋಧಿಗಳಿಗುಂಟಾದ ಶಿಕ್ಷೆಯನ್ನು ನಾನು ನೋಡುವಂತೆ ಮಾಡುವನು.
Kannada BSI Bible 2016
ಕರುಣೆಯುಳ್ಳ ನನ್ನ ದೇವರು ನನಗೆ ಪ್ರಸನ್ನನಾಗುವನು; ದೇವರು ನನ್ನ ಇಷ್ಟದಂತೆ ನನ್ನ ವಿರೋಧಿಗಳಿಗೆ ಆಗುವದನ್ನು ನೋಡುವಂತೆ ಮಾಡುವನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನನ್ನ ದೇವರು ಪ್ರಸನ್ನನಾಗಿ ನನಗೆ ಸಹಾಯಮಾಡುವನು; ನನ್ನ ವಿರೋಧಿಗಳಿಗುಂಟಾದ ಶಿಕ್ಷೆಯನ್ನು ನಾನು ನೋಡುವಂತೆ ಮಾಡುವನು.
Kannada Bible (KNCL) BSI 2016
ಪ್ರೀತಿಯಿಂದ ನೆರವಾಗುವನು ದೇವನೆನಗೆ I ಶತ್ರುಗಳಿಗಾದ ಸೋಲನು ತೋರಿಸುವನೆನಗೆ II
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ದೇವರು ಪ್ರಸನ್ನರಾಗಿ ನನ್ನ ಮುಂದೆ ಹೋಗುವರು. ದೇವರು ನನ್ನ ನಿಂದಕರ ಮೇಲೆ ಜಯಿಸುವಂತೆ ಮಾಡುವರು.