Psalms 65:10 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಉತ್ತಿರುವ ಹೊಲಗಳ ಮೇಲೆ ಮಳೆ ಸುರಿಸಿ, ಹೆಂಟೆಗಳನ್ನು ಕರಗಿಸಿ, ಭೂಮಿಯನ್ನು ಮೃದುಗೊಳಿಸಿ, ಎಳೆ ಸಸಿಗಳನ್ನು ಬೆಳೆಸುವಾತನು ನೀನೇ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೇಗಿಲಗೆರೆಗಳನ್ನು ತೇವಗೊಳಿಸಿ, ಮಳೆಯಿಂದ ಅದರ ಹೆಂಟೆಗಳನ್ನು ಕರಗಿಸಿ ಸಮಮಾಡುತ್ತಿ; ಅದರ ಬೆಳೆಯನ್ನು ವೃದ್ಧಿಪಡಿಸುತ್ತಿ.
Kannada BSI Bible 2016
ಉಳುವೆಯ ಸಾಲುಗಳನ್ನು ಸಮೃದ್ಧಿ ಯಾಗಿ ತ್ಯಾವಿಸುತ್ತೀ; ನೇಗಿಲ ಸಾಲುಗಳನ್ನು ಸಮಮಾಡುತ್ತೀ; ಸುರಿಯುವ ಮಳೆಯಿಂದ ಅದನ್ನು ಮೃದು ಮಾಡುತ್ತೀ; ಅದರ ಮೊಳಿಕೆಯನ್ನು ಆಶೀರ್ವದಿಸುತ್ತೀ.
Kannada BSI JV (ಕನ್ನಡ ಸತ್ಯವೇದವು J.V. (BSI))
ನೇಗಿಲಗೆರೆಗಳನ್ನು ತ್ಯಾವಿಸಿ ಮಳೆಯಿಂದ ಅದರ ಹೆಂಟೆಗಳನ್ನು ಕರಗಿಸಿ ಸಮಮಾಡುತ್ತೀ; ಅದರ ಬೆಳೆಯನ್ನು ವೃದ್ಧಿಪಡಿಸುತ್ತೀ.
Kannada Bible (KNCL) BSI 2016
ನೇಗಿಲ ಗೆರೆಯನು ತೋಯಿಸಿ ಮಣ್ಣಿನ ಹೆಂಟೆಯನು ಕರಗಿಸುತಿ I ಪೊಡವಿಯ ಹೊಲವ ಮಾಚಿಸಿ, ಹುಲುಸಾಗಿ ಪೈರನು ಬೆಳೆಸುತಿ II
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೇಗಿಲ ಸಾಲುಗಳನ್ನು ಸಮಮಾಡುತ್ತೀರಿ. ಸುರಿಯುವ ಮಳೆಯಿಂದ ಅದನ್ನು ಮೃದು ಮಾಡುತ್ತೀರಿ, ಅದರ ಮೊಳಕೆಯನ್ನು ಆಶೀರ್ವದಿಸುತ್ತೀರಿ.