Psalms 71:20 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನನ್ನನ್ನು ಅನೇಕ ಕಷ್ಟಹಿಂಸೆಗಳಿಗೆ ಗುರಿಮಾಡಿದಾತನು ನೀನೇ. ಆದರೆ ಅವೆಲ್ಲವುಗಳಿಂದ ನೀನು ನನ್ನನ್ನು ರಕ್ಷಿಸಿ ಜೀವಂತವಾಗಿ ಉಳಿಸಿದೆ. ಆಪತ್ತುಗಳಿಂದ ನಾನೆಷ್ಟೇ ಮುಳುಗಿಹೋಗಿದ್ದರೂ ಮೇಲೆತ್ತಿದಾತನು ನೀನೇ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಮ್ಮನ್ನು ಅನೇಕ ಕಷ್ಟನಷ್ಟಗಳಿಗೆ ಗುರಿಮಾಡಿದ ನೀನೇ ಪುನಃ ಉಜ್ಜೀವಿಸಮಾಡು; ನಮ್ಮನ್ನು ಭೂಮಿಯ ಅಧೋಭಾಗದಿಂದ ಮೇಲೆತ್ತು.
Kannada BSI Bible 2016
ಕಠಿಣವಾದ ಇಕ್ಕಟ್ಟುಗಳನ್ನು ನೋಡಮಾಡಿದ ನನ್ನನ್ನು ನೀನು ತಿರಿಗಿ ಬದುಕಿಸಿದಿ; ಭೂಮಿಯ ಆಗಾಧ ಗಳೊಳಗಿಂದ ನನ್ನನ್ನು ಮೇಲಕ್ಕೆ ತರುತ್ತೀ.
Kannada BSI JV (ಕನ್ನಡ ಸತ್ಯವೇದವು J.V. (BSI))
ನಮ್ಮನ್ನು ಅನೇಕ ಕಷ್ಟನಷ್ಟಗಳಿಗೆ ಗುರಿಮಾಡಿದ ನೀನೇ ಪುನಃ ಉಜ್ಜೀವಿಸಮಾಡು; ನಮ್ಮನ್ನು ಭೂವಿುಯ ಅಧೋಭಾಗದಿಂದ ಮೇಲೆತ್ತು.
Kannada Bible (KNCL) BSI 2016
ದೇವಾ, ಈಡು ಮಾಡಿದೆಯೆನ್ನನು ಕಷ್ಟಸಂಕಟಗಳಿಗೆ I ಪುನಶ್ಚೇತನಗೊಳಿಸೀಗ, ಭೂತಳದಿಂದೆತ್ತು ಮೇಲಕೆ II
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅನೇಕ ಕಠಿಣವಾದ ಇಕ್ಕಟ್ಟುಗಳನ್ನು ನೋಡ ಮಾಡಿದ ನನ್ನನ್ನು ನೀವು ತಿರುಗಿ ಬದುಕಿಸಿದ್ದೀರಿ. ಭೂಮಿಯ ಅಧೋಭಾಗದಿಂದ ಪುನಃ ನನ್ನನ್ನು ಮೇಲಕ್ಕೆ ಎತ್ತುವಿರಿ.