Psalms 74:16 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನೀನು ಹಗಲನ್ನೂ ರಾತ್ರಿಯನ್ನೂ ನಿನ್ನ ಹತೋಟಿಯಲ್ಲಿಟ್ಟುಕೊಂಡಿರುವೆ. ಸೂರ್ಯನನ್ನೂ ಚಂದ್ರನನ್ನೂ ಸೃಷ್ಟಿಮಾಡಿದಾತನು ನೀನೇ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹಗಲಿರುಳುಗಳನ್ನು ನೇಮಿಸಿದವನು ನೀನು; ಸೂರ್ಯ ಮತ್ತು ಜ್ಯೋತಿರ್ಮಂಡಲಗಳ ನಿರ್ಮಾಪಕನು ನೀನು.
Kannada BSI Bible 2016
ಹಗಲು ನಿನ್ನದು; ರಾತ್ರಿಯು ಸಹ ನಿನ್ನದು; ನೀನು ಬೆಳಕನ್ನೂ ಸೂರ್ಯ ನನ್ನೂ ಸಿದ್ಧಮಾಡಿದ್ದೀ.
Kannada BSI JV (ಕನ್ನಡ ಸತ್ಯವೇದವು J.V. (BSI))
ಹಗಲಿರುಳುಗಳಿಗೆ ನಿಯಾಮಕನು ನೀನು; ಸೂರ್ಯಾದಿ ಜ್ಯೋತಿರ್ಮಂಡಲಗಳ ನಿರ್ಮಾಣಕನು ನೀನು.
Kannada Bible (KNCL) BSI 2016
ಹಗಲಿರುಳುಗಳಿಗೆ ನಿಯಾಮಕ ನೀನು I ರವಿತಾರೆಗಳ ನಿರ್ಮಾಪಕ ನೀನು II
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹಗಲು ನಿಮ್ಮದು, ರಾತ್ರಿಯು ಸಹ ನಿಮ್ಮದು. ನೀವು ಸೂರ್ಯಚಂದ್ರನನ್ನೂ ಸ್ಥಾಪಿಸಿದ್ದೀರಿ.